ರಾಹುಲ್ ಜಾಕೆಟ್ ಮೇಲೆ ಬಿಜೆಪಿ ಕಣ್ಣು !
Update: 2018-01-31 20:28 IST
ಶಿಲ್ಲಾಂಗ್, ಜ. 31: ರೂ. 70 ಸಾವಿರ ಬೆಲೆಯ ಕಪ್ಪು ಜಾಕೆಟ್ ಧರಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಬಿಜೆಪಿ ಬುಧವಾರ ಲೇವಡಿ ಮಾಡಿದೆ.
ಶಿಲ್ಲಾಂಗ್‌ನಲ್ಲಿ ಮಂಗಳವಾರ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ಜಾಕೆಟ್ ಧರಿಸಿದ ಫೋಟೊ ವೈರಲ್ ಆಗಿತ್ತು.
2015ರಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರೊಂದಿಗಿನ ಭೇಟಿ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಸೂಟ್ ಧರಿಸಿರುವುದಕ್ಕೆ ರಾಹುಲ್ ಗಾಂಧಿ ‘ಸೂಟ್ ಬೂಟ್ ಸರಕಾರ’ ಎಂದು ಲೇವಡಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಈ ಬಾರಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದೆ.
ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕಿ ರೇಣುಕಾ ಚೌಧುರಿ, ‘‘ಇದೇ ರೀತಿಯ 700 ರೂಪಾಯಿಯ ಜಾಕೆಟ್ ಅನ್ನು ನಾನು ನಿಮಗೆ ತೋರಿಸಬಲ್ಲೆ’’ ಎಂದಿದ್ದಾರೆ.