×
Ad

ಗೂಢಚರ್ಯೆ ಆರೋಪ: ವಾಯುಪಡೆ ಅಧಿಕಾರಿ ವಶಕ್ಕೆ

Update: 2018-01-31 23:43 IST

ಹೊಸದಿಲ್ಲಿ, ಜ.31: ಗೂಢಚರ್ಯೆ ಕಾರ್ಯ ನಡೆಸುತ್ತಿದ್ದ ಆರೋಪದಲ್ಲಿ ವಾಯುಪಡೆ ಹಿರಿಯ ಅಧಿಕಾರಿಯೋರ್ವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

     ಈ ಅಧಿಕಾರಿ ವಾಟ್ಸ್ ಆ್ಯಪ್  ಹಾಗೂ ಫೇಸ್‌ಬುಕ್ ಮೂಲಕ ಅನಪೇಕ್ಷಿತ ಕೃತ್ಯಗಳನ್ನು ನಡೆಸುತ್ತಿದ್ದರು. ದೈನಂದಿನ ಗಸ್ತುಕಾರ್ಯದ ಸಂದರ್ಭ ಅಧಿಕಾರಿಯ ಕೃತ್ಯ ಬೆಳಕಿಗೆ ಬಂದಿದ್ದು ಎರಡು ದಿನದ ಹಿಂದೆ ಅವರನ್ನು ವಶಕ್ಕೆ ಪಡೆಯಲಾಗಿದೆ. ಯಾವುದಾದರೂ ಸೂಕ್ಷ್ಮ ವಿಷಯಗಳನ್ನು ಇವರು ವರ್ಗಾಯಿಸಿದ್ದಾರೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ತನಿಖೆ ನಡೆಯುತ್ತಿರುವ ಕಾರಣ ಅಧಿಕಾರಿಯ ಹೆಸರು ಮತ್ತು ಅವರ ಹುದ್ದೆಯನ್ನು ಬಹಿರಂಗಗೊಳಿಸಲಾಗದು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News