ಬಜೆಟ್ 2018: ಶಿಕ್ಷಣ ಕ್ಷೇತ್ರದ ವಿವಿಧ ಯೋಜನೆಗಳ ವಿವರ

Update: 2018-02-01 14:09 GMT

ಹೊಸದಿಲ್ಲಿ, ಫೆ.1: ಮಕ್ಕಳನ್ನು ಶಾಲೆಗೆ ಸೇರಿಸಲು ಸರಕಾರ ವಿವಿಧ ಯೋಜನೆಗಳ ಮೂಲಕ ಯಶಸ್ವಿಯಾದರೂ ಶಿಕ್ಷಣದ ಗುಣಮಟ್ಟ ಇನ್ನೂ ಕಳವಳಕಾರಿಯಾಗಿಯೇ ಇದೆ. ಈ ನಿಟ್ಟಿನಲ್ಲಿ ಶಿಕ್ಷಕರಿಗೆ ತರಬೇತಿ ನೀಡುವ ನೂತನ ಯೋಜನೆಯನ್ನು ಸರಕಾರ ಆರಂಭಿಸಲಿದೆ ಎಂದು ವಿತ್ತ ಸಚಿವ ಅರುಣ್ ಘೋಷಿಸಿದ್ದಾರೆ. ಅಲ್ಲದೆ ಬುಡಕಟ್ಟು ಜನತೆ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ ಏಕಲವ್ಯ ಮಾದರಿ ಶಾಲೆ ಆರಂಭಿಸಲು ನಿರ್ಧರಿಸಲಾಗಿದೆ.

ಯೋಜನೆಯ ಪ್ರಮುಖ ಅಂಶಗಳು.

► ಆರೋಗ್ಯ ಹಾಗೂ ಶಿಕ್ಷಣಕ್ಕೆ 1.38 ಲಕ್ಷ ಕೋಟಿ ಅನುದಾನ.

► 2022ರ ಮೊದಲು ‘ಶಿಕ್ಷಣ ಕ್ಷೇತ್ರದ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯಗಳ ಪುನರುಜ್ಜೀವನ’ ಯೋಜನೆಗೆ ಚಾಲನೆ.

► ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಶಿಕ್ಷಣಕ್ಕೆ ಆದ್ಯತೆ . ‘ಕರಿಹಲಗೆಯ ಬದಲು ಡಿಜಿಟಲ್ ಹಲಗೆ(ಬೋರ್ಡ್)’ ಅಭಿಯಾನ.

► ಪರಿಶಿಷ್ಟ ಪಂಗಡದವರು ಶೇ.50ಕ್ಕೂ ಹೆಚ್ಚಿನ ಪ್ರಮಾಣದಲ್ಲಿರುವ ಪ್ರದೇಶಗಳಲ್ಲಿ ಏಕಲವ್ಯ ಮಾದರಿ ಶಾಲೆಗಳ ಆರಂಭ.

► ಶಿಕ್ಷಕರಿಗೆ ತರಬೇತಿ ನೀಡುವ ‘ದೀಕ್ಷಾ’ ಯೋಜನೆಯಡಿ 13 ಲಕ್ಷ ತರಬೇತಿ ಪಡೆಯದ ಶಿಕ್ಷಕರಿಗೆ ಸಾಂಪ್ರದಾಯಿಕ ತರಬೇತಿ. ಶಿಕ್ಷಕರಿಗೆ ಸಮಗ್ರ ಬಿ.ಎಡ್ ಯೋಜನೆ ಆರಂಭ.

► ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ‘ಪ್ರಧಾನಮಂತ್ರಿ ರಿಸರ್ಚ್ ಫೆಲೊ’ ಯೋಜನೆ ಆರಂಭ. ಈ ಯೋಜನೆಯಡಿ 1000 ಬಿ.ಟೆಕ್ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಐಐಟಿಗಳು ಹಾಗೂ ಇತರ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪಿಎಚ್‌ಡಿ ಅಧ್ಯಯನ ನಡೆಸಲು ನೆರವು.

► ಪ್ರತೀ ಮೂರು ಲೋಕಸಭಾ ಕ್ಷೇತ್ರಗಳಿಗೆ ಕನಿಷ್ಟ ಒಂದು ಮೆಡಿಕಲ್ ಕಾಲೇಜು

► ಕೆಲವು ಜಿಲ್ಲಾಮಟ್ಟದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದೂ ಸೇರಿದಂತೆ ನೂತನವಾಗಿ 24 ಮೆಡಿಕಲ್ ಕಾಲೇಜು ಆಸ್ಪತ್ರೆಗಳ ಸ್ಥಾಪನೆ.

► ಎರಡು ಸುವ್ಯವಸ್ಥಿತ ‘ಯೋಜನೆ ಮತ್ತು ವಾಸ್ತುಶಿಲ್ಪ’ ಶಿಕ್ಷಣ ಸಂಸ್ಥೆಗಳು ಸೇರಿದಂತೆ 18 ನೂತನ ಐಐಟಿ, ಎನ್‌ಐಐಟಿಗಳ ಸ್ಥಾಪನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News