×
Ad

ಉದ್ಯಮಗಳಿಗೆ ವಿಶಿಷ್ಟ ಗುರುತು

Update: 2018-02-01 22:35 IST

ಹೊಸದಿಲ್ಲಿ, ಫೆ. 1: ಭಾರತದಲ್ಲಿರುವ ಎಲ್ಲ ಉದ್ಯಮಗಳಿಗೆ ‘ಆಧಾರ್’ ಮಾದರಿಯಲ್ಲಿ ವಿಶಿಷ್ಟ ಗುರುತನ್ನು ನೀಡುವು ಯೋಜನೆಯೊಂದನ್ನು ಸರಕಾರ ರೂಪಿಸಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಗುರುವಾರ ಹೇಳಿದ್ದಾರೆ.

‘‘ಆಧಾರ್ ಪ್ರತಿಯೊಬ್ಬ ಭಾರತೀಯನಿಗೆ ಗುರುತು ನೀಡಿದೆ. ಹಲವು ಸರಕಾರಿ ಸೇವೆಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಆಧಾರ್ ಸುಲಭಗೊಳಿಸಿದೆ’’ ಎಂದು 2018-19ರ ಕೇಂದ್ರ ಬಜೆಟ್ ಮಂಡಿಸಿದ ಜೇಟ್ಲಿ ನುಡಿದರು.

‘‘ಉದ್ಯಮ ದೊಡ್ಡದಿರಲಿ, ಸಣ್ಣದಿರಲಿ ವಿಶಿಷ್ಟ ಗುರುತು ಅಗತ್ಯವಾಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News