ಲೋಕಪಾಲಕ್ಕೆ 4.29 ಕೋಟಿ ರೂ.; ಸಿವಿಸಿಗೆ 1.5 ಕೋಟಿ ರೂ. ಹೆಚ್ಚಳ

Update: 2018-02-01 17:13 GMT

ಹೊಸದಿಲ್ಲಿ, ಫೆ. 1: ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಪಾಲಕ್ಕಾಗಿ ನೀಡುವ ಅನುದಾನದಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಎಂದಿನಂತೆ ಅದಕ್ಕೆ 4.29 ಕೋಟಿ ರೂ. ಒದಗಿಸಲಾಗಿದೆ.

 ಅದೇ ವೇಳೆ, ಮುಂದಿನ ಆರ್ಥಿಕ ವರ್ಷದಲ್ಲಿ ಕೇಂದ್ರೀಯ ಜಾಗೃತ ಆಯೋಗಕ್ಕೆ ನೀಡಲಾಗುವ ಅನುದಾನವನ್ನು 1.5 ಕೋಟಿ ರೂ.ಯಷ್ಟು ಹೆಚ್ಚಿಸುವ ಪ್ರಸ್ತಾಪವನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್‌ನಲ್ಲಿ ಮಂಡಿಸಿದ್ದಾರೆ.

ಲೋಕಪಾಲ ಇನ್ನೂ ಕೂಡ ಸ್ಥಾಪನೆಯಾಗಿಲ್ಲ. ಲೋಕಪಾಲ ಸ್ಥಾಪನೆ ಮತ್ತು ಕಟ್ಟಡ ನಿರ್ಮಾಣ ವೆಚ್ಚಗಳಿಗಾಗಿ ಈ ನಿಧಿಯನ್ನು ಒದಗಿಸಲಾಗಿದೆ.

2013ರ ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆಯ ಪ್ರಕಾರ, ಭ್ರಷ್ಟಾಚಾರ ನಿಗ್ರಹಕ್ಕಾಗಿ ಕೇಂದ್ರ ಸರಕಾರಕ್ಕೆ ಲೋಕಪಾಲ ಮತ್ತು ರಾಜ್ಯಗಳಿಗೆ ಲೋಕಾಯುಕ್ತರನ್ನು ನೇಮಿಸಬೇಕಾಗಿದೆ.

ಕೇಂದ್ರೀಯ ಜಾಗೃತ ಆಯೋಗಕ್ಕೆ (ಸಿವಿಸಿ)ಕ್ಕೆ ಈ ಬಾರಿ 32.61 ಕೋಟಿ ರೂ. ಅನುದಾನವನ್ನು ನೀಡಲಾಗಿದೆ. ಇದು ಕಳೆದ ಬಾರಿಗಿಂತ 1.58 ಕೋಟಿ ರೂ. ಹೆಚ್ಚಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News