ದಿಲ್ಲಿ-ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಯೋಜನೆ

Update: 2018-02-01 17:50 GMT

ಹೊಸದಿಲ್ಲಿ, ಫೆ. 1: ದಿಲ್ಲಿ ಹಾಗೂ ರಾಷ್ಟ್ರ ರಾಜಧಾನಿ ವಲಯದಲ್ಲಿ ಮಾಲಿನ್ಯದ ಗಂಬೀರ ಸಮಸ್ಯೆ ಪರಿಗಣನೆಗೆ ತೆಗೆದುಕೊಂಡಿರುವ ಅರುಣ್ ಜೇಟ್ಲಿ, ತನ್ನ ಬಜೆಟ್ ಭಾಷಣದಲ್ಲಿ ಅತ್ಯಧಿಕ ಮಟ್ಟದ ವಾಯು ಮಾಲಿನ್ಯವನ್ನು ನಿಯಂತ್ರಿಸಲು ದಿಲ್ಲಿ ಸರಕಾರ ಹಾಗೂ ಸನಿಹದ ರಾಜ್ಯಗಳಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಈ ನಡೆಯನ್ನು ಸ್ವಾಗತಿಸಿರುವ ತಜ್ಞರು, ಮಾಲಿನ್ಯ ರಾಷ್ಟ್ರದ ಸಮಸ್ಯೆ. ಇದು ದಿಲ್ಲಿ ಹಾಗೂ ಎನ್‌ಸಿಆರ್ ಪ್ರದೇಶದ ಸಮಸ್ಯೆ ಮಾತ್ರವಲ್ಲ. ಈ ಬಗ್ಗೆ ವ್ಯಾಪಕ ಬೆಂಬಲ ಅಗತ್ಯವಿದೆ ಎಂದು ಹೇಳಿದ್ದಾರೆ.

ದಿಲ್ಲಿ ಹಾಗೂ ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯ ಕಳವಳಕಾರಿ ವಿಚಾರ. ಈ ಸಮಸ್ಯೆ ಪರಿಹರಿಸಲು ದಿಲ್ಲಿ, ಉತ್ತರಪ್ರದೇಶ, ಪಂಜಾಬ್ ಹಾಗೂ ಹರ್ಯಾಣ ಸರಕಾರಗಳ ಪ್ರಯತ್ನಕ್ಕೆ ಬೆಂಬಲವಾಗಿ ವಿಶೇಷ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದರು. ದಿಲ್ಲಿ-ಎನ್‌ಸಿಆರ್ ವಲಯದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ದಿಲ್ಲಿ ಹಾಗೂ ಸಮೀಪದ ರಾಜ್ಯಗಳಲ್ಲಿ ಬೆಳೆ ತ್ಯಾಜ್ಯ ದಹನ ಸಮಸ್ಯೆ ನಿಯಂತ್ರಿಸಲು ಸರಣಿ ಕ್ರಮಗಳನ್ನು ಕೈಗೊಳ್ಳುವುದು ಸೇರಿದಂತೆ ವಿಸ್ತೃತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆರ್ಥಿಕ ಸಮೀಕ್ಷೆಯೊಂದು ಮಂಗಳವಾರ ಸಲಹೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News