×
Ad

ಟೆಲಿಕಾಂ ಮೂಲ ಸೌರ್ಕಯ ಅಭಿವೃದ್ಧಿಗೆ 10,000 ಕೋ. ರೂ.

Update: 2018-02-01 23:22 IST

ಹೊಸದಿಲ್ಲಿ, ಫೆ. 1: ದೇಶದ ವಿವಿಧ ಸರಕಾರಗಳ ಯೋಜನೆಗಳ ಅಡಿಯಲ್ಲಿ ಟೆಲಿಕಾಂ ಮೂಲ ಸೌಕರ್ಯ ವಿಸ್ತರಣೆಗೆ 10,000 ಕೋಟಿ ರೂಪಾಯಿಯನ್ನು ಅರುಣ್ ಜೇಟ್ಲಿ ಘೋಷಿಸಿದ್ದಾರೆ.

‘‘ಟೆಲಿಕಾಂ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಸೃಷ್ಟಿಗೆ ನಾನು 10,000 ಕೋ. ರೂ. ನೀಡಲಿದ್ದೇನೆ’’ ಎಂದು ಅವರು ಹೇಳಿದ್ದಾರೆ.

2019 ಮೇ ಒಳಗೆ 2.5 ಲಕ್ಷ ಗ್ರಾಮ ಪಂಚಾಯತ್‌ಗಳನ್ನು ಸಂಪರ್ಕಿಸುವ ಗುರಿಯನ್ನು ಭಾರತ್ ನೆಟ್ ಯೋಜನೆ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

ಅತ್ಯಾಧುನಿಕ ತಂತ್ರಜ್ಞಾನ ಮುಖ್ಯವಾಗಿ 5ನೇ ತಲೆಮಾರಿನ ತಂತ್ರಜ್ಞಾನದ ಲಾಭ ಪಡೆಯಲು ಐಐಟಿ ಚೆನ್ನೈಯೊಂದಿಗೆ ದೇಶಿ 5ಜಿ ಕೇಂದ್ರಗಳನ್ನು ಸ್ಥಾಪಿಸಲು ಟೆಲಿಕಾಂ ಇಲಾಖೆ ಬೆಂಬಲ ನೀಡಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News