ಪಂಜಾಬ್‌ಗೆ ಹರ್ಭಜನ್ ನಾಯಕ
Update: 2018-02-02 23:34 IST
ಮೊಹಾಲಿ, ಫೆ.2: ಮುಂಬರುವ ವಿಜಯ್ ಹಝಾರೆ ಟ್ರೋಫಿ ಏಕದಿನ ಟೂರ್ನಮೆಂಟ್‌ನಲ್ಲಿ ಹಿರಿಯ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಪಂಜಾಬ್ ತಂಡದ ನಾಯಕತ್ವವಹಿಸಿಕೊಳ್ಳಲಿದ್ದಾರೆ ಎಂದು ಪಂಜಾಬ್ ಕ್ರಿಕೆಟ್ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ವಿಜಯ್ ಹಝಾರೆ ಟ್ರೋಫಿ ಕರ್ನಾಟಕದ ಆಲೂರ್‌ನಲ್ಲಿ ಫೆ.7 ರಿಂದ 16ರ ತನಕ ನಡೆಯಲಿದೆ.
ಆಲ್‌ರೌಂಡರ್ ಯುವರಾಜ್ ಸಿಂಗ್ ಪಂಜಾಬ್‌ನ ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಪಂಜಾಬ್ ತಂಡ ಫೆ.7 ರಂದು ಹರ್ಯಾಣದ ವಿರುದ್ಧ ಮೊದಲ ಲೀಗ್ ಪಂದ್ಯವನ್ನು ಆಡಲಿದೆ.
►ಪಂಜಾಬ್ ತಂಡ: ಹರ್ಭಜನ್ ಸಿಂಗ್(ನಾಯಕ), ಯುವರಾಜ್ ಸಿಂಗ್(ಉಪನಾಯಕ), ಮನನ್ ವೋರ, ಮನ್‌ದೀಪ್ ಸಿಂಗ್, ಗುರುಕೀರತ್ ಸಿಂಗ್, ಅಭಿಷೇಕ್ ಗುಪ್ತಾ, ಗಿತ್ನಾಶ್ ಖೇರ, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮ, ಅಭಿಷೇಕ್ ಶರ್ಮ, ಶುಭ್‌ಮನ್ ಗಿಲ್, ಮನ್‌ಪ್ರೀತ್ ಸಿಂಗ್, ಬರಿಂದರ್ ಸಿಂಗ್, ಮಾಯಾಂಕ್ ಮಾರ್ಕಾಂಡೆ ಹಾಗೂ ಶರದ್ ಲಂಬಾ.