ಸ್ಕ್ವಾಷ್ ರ್ಯಾಂಕಿಂಗ್: ಸೌರವ್ ಜೀವನಶ್ರೇಷ್ಠ ಸಾಧನೆ

Update: 2018-02-02 18:06 GMT

ಹೊಸದಿಲ್ಲಿ, ಫೆ.2: ಭಾರತದ ಅಗ್ರ ಸ್ಕ್ವಾಷ್ ಆಟಗಾರ ಸೌರವ್ ಘೋಷಾಲ್ ಐದು ಸ್ಥಾನ ಭಡ್ತಿ ಪಡೆದು ವೃತ್ತಿಪರ ಸ್ಕ್ವಾಷ್ ಅಸೋಸಿಯೇಶನ್(ಪಿಎಸ್‌ಎ)ರ್ಯಾಂಕಿಂಗ್‌ನಲ್ಲಿ 14ನೇ ಸ್ಥಾನ ತಲುಪಿದ್ದಾರೆ. ಪಿಎಸ್‌ಎ ರ್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ಸಾಧನೆ ಮಾಡಿರುವ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಘೋಷಾಲ್ ಅವರು ಜೋಶ್ನಾ ಚಿನ್ನಪ್ಪರನ್ನು ಹಿಂದಿಕ್ಕಿದರು. ಚಿನ್ನಪ್ಪ 3 ಸ್ಥಾನ ಕೆಳ ಜಾರಿ 17ನೇ ಸ್ಥಾನ ತಲುಪಿದರು. ದೀಪಿಕಾ ಪಲ್ಲಿಕಲ್ 20ನೇ ಸ್ಥಾನ ಕಾಯ್ದುಕೊಂಡರು.

ಭಾರತದ ಮಾಜಿ ನ್ಯಾಶನಲ್ ಚಾಂಪಿಯನ್ ಹರಿಂದರ್ ಪಾಲ್ ಸಂಧು 49ನೇ ಸ್ಥಾನ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News