ಭಾರತ ವಿರುದ್ಧ ಸರಣಿಯಿಂದ ಪ್ಲೆಸಿಸ್ ಔಟ್

Update: 2018-02-02 18:21 GMT

ಕೇಪ್‌ಟೌನ್, ಫೆ.2: ಬೆರಳು ನೋವಿನಿಂದ ಬಳಲುತ್ತಿರುವ ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ನಾಯಕ ಎಫ್‌ಡು ಪ್ಲೆಸಿಸ್ ಭಾರತ ವಿರುದ್ಧದ ಏಕದಿನ ಸರಣಿಯ ಉಳಿದ 5 ಪಂದ್ಯಗಳು ಹಾಗೂ ಮುಂಬರುವ ಟ್ವೆಂಟಿ-20 ಸರಣಿಯಿಂದ ಹೊರಗುಳಿದಿದ್ದಾರೆ.

ಕಿಂಗ್ಸ್‌ಮೀಡ್‌ನಲ್ಲಿ ಗುರುವಾರ ನಡೆದ ಮೊದಲ ಏಕದಿನ ಪಂದ್ಯದ ವೇಳೆ ಪ್ಲೆಸಿಸ್‌ರ ಬಲ ಮಧ್ಯ ಬೆರಳಿಗೆ ಗಾಯವಾಗಿತ್ತು. ಹೆಚ್ಚಿನ ಪರೀಕ್ಷೆಯ ಬಳಿಕ ಅವರ ಬೆರಳಿನಲ್ಲಿ ಬಿರುಕು ಬಿಟ್ಟಿರುವುದು ಪತ್ತೆಯಾಗಿದ್ದು, ವೈದ್ಯರು ಮೂರರಿಂದ ಆರು ವಾರಗಳ ಕಾಲ ವಿಶ್ರಾಂತಿಗೆ ಸೂಚಿಸಿದ್ದಾರೆ.

 ವಿಶ್ರಾಂತಿ ಪಡೆಯಲಿರುವ ಪ್ಲೆಸಿಸ್ ಮಾ.1ರಂದು ಆರಂಭವಾಗಲಿರುವ ಆಸ್ಟ್ರೇಲಿಯ ವಿರುದ್ಧ ಟ್ವೆಂಟಿ-20 ಸರಣಿಗೆ ತಂಡಕ್ಕೆ ವಾಪಸಾಗಲಿದ್ದಾರೆ.

ಡು ಪ್ಲೆಸಿಸ್ ಬದಲಿಗೆ ಫರ್ಹಾನ್ ಬೆಹಾರ್ದಿನ್‌ರನ್ನು ಆಯ್ಕೆ ಸಮಿತಿಯು ಆಯ್ಕೆ ಮಾಡಿದೆ. ಶನಿವಾರ ಸರಣಿಯ ಉಳಿದ ಪಂದ್ಯಗಳಿಗೆ ನಾಯಕನನ್ನು ಘೋಷಿಸಲಾಗುತ್ತದೆ. ಎಬಿಡಿ ವಿಲಿಯರ್ಸ್ ಹಾಗೂ ಡೇಲ್ ಸ್ಟೇಯ್ನೆ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News