ಜೊಕೊವಿಕ್‌ಗೆ ಶಸ್ತ್ರಚಿಕಿತ್ಸೆ?
Update: 2018-02-02 23:56 IST
ಪ್ಯಾರಿಸ್, ಫೆ.2: ಮೊಣಕೈ ನೋವಿನಿಂದ ಚೇತರಿಸಿಕೊಂಡು ಆರು ತಿಂಗಳ ಬಳಿಕ ಇತ್ತೀಚೆಗಷ್ಟೇ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಟೂರ್ನಿಗೆ ವಾಪಸಾಗಿದ್ದ ವಿಶ್ವದ ಮಾಜಿ ನಂ.1 ಟೆನಿಸ್ ತಾರೆ ನೊವಾಕ್ ಜೊಕೊವಿಕ್ ಮತ್ತೊಂದು ಗಾಯದ ಸಮಸ್ಯೆ ಎದುರಿಸುತ್ತಿದ್ದು, ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಸ್ವಿಸ್ ದಿನಪತ್ರಿಕೆ ‘ಬ್ಲಿಕ್’ ವರದಿ ಮಾಡಿದೆ. 12 ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್ ಆಗಿರುವ ಜೊಕೊವಿಕ್ ವೈದ್ಯಕೀಯ ಸಲಹೆ ಪಡೆಯಲು ಸರ್ಬಿಯದಿಂದ ಝೆಕ್ ಗಣರಾಜ್ಯಕ್ಕೆ ಪ್ರಯಾಣಿಸಲಿದ್ದಾರೆ. ಸ್ವಿಸ್ ನಗರ ಮುಟೆಂಝ್‌ಗೆ ತೆರಳಿರುವ ಜೊಕೊವಿಕ್ ಬಲಗೈಗೆ ಬ್ಯಾಂಡೇಜ್ ಹಾಕಿಕೊಂಡಿದ್ದಾರೆಂದು ವರದಿಯಾಗಿದೆ. 30ರ ಹರೆಯದ ಜೊಕೊವಿಕ್ ಬಲಗೈ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಇದು ಮೊಣಕೈಗೆ ಸಂಬಂಧಿಸಿದ್ದಲ್ಲ. ಜೊಕೊವಿಕ್ ಜೊತೆ ಕೋಚ್ ರಾಡೆಕ್ ಸ್ಟೆಪ್ನೆಕ್ ಅವರಿದ್ದಾರೆ ಎಂದು ವರದಿಯಾಗಿದೆ.