ಫರಂಗಿಪೇಟೆ: ಎಸ್.ಡಿ.ಪಿ.ಐ. ಕಾರ್ಯಕರ್ತರ ಸಭೆ

Update: 2018-02-03 05:34 GMT

ಫರಂಗಿಪೇಟೆ ಫೆ.3: ಈ ತಿಂಗಳ 18ರಂದು ನಡೆಯಲಿರುವ ಪುದು ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿ ಎಸ್.ಡಿ.ಪಿ.ಐ. ಕಾರ್ಯಕರ್ತರ ಸಭೆಯು ಫರಂಗಿಪೇಟೆಯ ವಿಶ್ವಾಸ್ ಸಭಾಂಗಣದಲ್ಲಿ ಶುಕ್ರವಾರ ಜರುಗಿತು

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಈ ಸಲ ಪುದು ಗ್ರಾಮ ಪಂಚಾಯತ್ ಚುನಾವಣೆಯನ್ನು ಎಸ್.ಡಿ.ಪಿ.ಐ. ಬೆಂಬಲಿತ ಅಭ್ಯರ್ಥಿಗಳ ಗೆಲುವು ಜನತೆಯ ಗೆಲುವು ಎಂಬ ಘೋಷಣೆಯೊಂದಿಗೆ ಎದುರಿಸಲಿದೆ. ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ಅವಿರತವಾಗಿ ಶ್ರಮಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಈ ಸಂದರ್ಭ ಪುದು ಗ್ರಾಪಂ ಚುನಾವಣೆಯ ಪಕ್ಷದ ಉಸ್ತುವಾರಿ ಶಾಹುಲ್ ಎಸ್.ಎಚ್. ಪಕ್ಷದ ಚುನಾವಣಾ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಈ ಪ್ರಕಾರ ಕುಂಪನಮಜಲು - ಸಿರಾಜ್ ಮತ್ತು ಶರೀಫ್, ಅಮೆಮಾರ್(ಕೆಳಗೆ)- ಮುಹಮ್ಮದ್ ಶಾಫಿ, ಅಮೆಮಾರ್(ಮೇಲೆ)- ಸುಲೈಮಾನ್ ಮತ್ತು ಶಾಕಿರ್, ಕುಂಜತ್ಕಲ್- ನಝೀರ್ ಹತ್ತನೇ ಮೈಲ್ ಕಲ್ಲು, ಪೇರಿಮಾರ್- ಇಬ್ರಾಹೀಂ ಮಾರಿಪಳ್ಳ, ಲತೀಫ್ ಮತ್ತು ಜಮೀಲಾ, ಸುಜೀರ್- ಅಶ್ರಫ್, ಫರಂಗಿಪೇಟೆ ಸಾಜಿದ್ ಅಭ್ಯರ್ಥಿಗಳಾಗಿದ್ದಾರೆ.

ಕಾರ್ಯಕರ್ತರ ಸಭೆಯ ವೇದಿಕೆಯಲ್ಲಿ ಗ್ರಾಮ ಸಮಿತಿಯ ಅಧ್ಯಕ್ಷ ಇಕ್ಬಾಲ್, ವಲಯಾಧ್ಯಕ್ಷ ಸುಲೈಮಾನ್ ಉಸ್ತಾದ್, ಚುನಾವಣಾ ಸಹ ಉಸ್ತುವಾರಿ ಸಲೀಮ್ ಕುಂಪನಮಜಲು ಮತ್ತು ಜಿಲ್ಲಾ ಕೋಶಾಧಿಕಾರಿ ಇಕ್ಬಾಲ್ ಐ.ಎಂ.ಆರ್. ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News