ಅಲ್ಪಸಂಖ್ಯಾತರ ಹಿತರಕ್ಷಣೆಗೆ ಆಯೋಗ ಬದ್ಧ: ನಸೀರ್ ಅಹ್ಮದ್

Update: 2018-02-03 07:04 GMT

ಸುಳ್ಯ, ಫೆ.3: ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಹಾಗೂ ಅಲ್ಪಸಂಖ್ಯಾತರ ಹಿತ ರಕ್ಷಣೆಗೆ ಕರ್ನಾಟಕ ಅಲ್ಪಸಂಖ್ಯಾತರ ಆಯೋಗ ಬದ್ಧ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಸೀರ್ ಅಹ್ಮದ್ ಹೇಳಿದರು.

ಇಲ್ಲಿನ ಗಾಂಧಿ ನಗರದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್‌ನ ಗೋಲ್ಡನ್ ಜುಬಿಲಿ ಅಂಗವಾಗಿ ಸುಳ್ಯದಲ್ಲಿ ನಡೆದ ಸಮಾರೋಪ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಅಲ್ಪಸಂಖ್ಯಾತರ ಆಯೋಗವು ಈಗಾಗಲೇ ರಾಜ್ಯಾದ್ಯಂತ ಪ್ರವಾಸ ನಡೆಸಿ ಸಮಸ್ಯೆಗಳ ಬಗ್ಗೆ ಮತ್ತು ಅಭಿವೃದ್ಧಿಯ ಬಗ್ಗೆ ಪರಿಶೀಲನಾ ಸಭೆ ನಡೆಸುತ್ತಿದ್ದು, ನಂತರ ಕ್ರಿಯಾ ಯೋಜನೆಯನ್ನು ತಯಾರಿಸಿ ಕಾನೂನುಗಳನ್ನು ಇನ್ನಷ್ಟು ಬಿಗಿಗೊಳಿಸಿ ರಕ್ಷಣೆಗೆ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಕಾರ್ಯಕ್ರಮವನ್ನು ಮಾಣಿ ದಾರುಲ್ ಇರ್ಶಾದ್ ಅಧ್ಯಕ್ಷ ಶೈಖುನಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಜಿ ಕೆ.ಎಂ.ಮುಸ್ತಫ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯರಾದ ಮಹೇಂದ್ರ ಜೈನ್, ಬಲ್‌ಬೀರ್ ಸಿಂಗ್, ಅಬ್ದುಲ್ ಹಮೀದ್, ರಾಫಿ ಭಂಡಾರಿ, ಆದಿ ಸುಲೈಮಾನ್ ಸೇಠ್, ಮಾರ್ಷಲ್ ಮೊಂತೇರೊ, ಜಿಲ್ಲಾ ವಕ್ಫ್ ಸಮಿತಿಯ ಅಧ್ಯಕ್ಷ ಕಣಚೂರು ಮೋನು ಹಾಜಿ, ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯ ಸಂಶುದ್ದೀನ್, ಮಾಜಿ ಕೇಂದ್ರ ನಾರು ಮಂಡಳಿಯ ಸದಸ್ಯ ಟಿ.ಎಂ. ಶಹೀದ್, ಮಾಜಿ ಜಿಪಂ ಉಪಾಧ್ಯಕ್ಷ ಎಂ.ಎಸ್.ಮುಹಮ್ಮದ್, ನೂರುದ್ದೀನ್ ಸಾಲ್ಮರ, ಕೆಪೆಕ್ ನಿರ್ದೇಶಕ ಪಿ.ಎ.ಮುಹಮ್ಮದ್, ಹಾಜಿ. ಪಿ. ಇಸಾಕ್ ಸಾಹೇಬ್ ಮತ್ತಿತರರು ಉಪಸ್ಥಿತರಿದ್ದರು.

ಲತೀಫ್ ಸಖಾಫಿ ಗೂನಡ್ಕ ಸ್ವಾಗತಿಸಿದರು. ಶೌಕತ್ ಅಲಿ ಅಮಾನಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News