×
Ad

22 ಭಾರತೀಯರಿದ್ದ ಹಡಗು ನೈಜೀರಿಯಾದಲ್ಲಿ ನಾಪತ್ತೆ

Update: 2018-02-03 20:20 IST

ಹೊಸದಿಲ್ಲಿ, ಫೆ.3: 22 ಭಾರತೀಯರಿದ್ದ ವ್ಯಾಪಾರಿ ಹಡಗೊಂದು ಪಶ್ಚಿಮ ಆಪ್ರಿಕಾದ ಬೆನಿನ್ ಕರಾವಳಿಯಲ್ಲಿ ನಾಪತ್ತೆಯಾಗಿದ್ದು ಅಬುಜಾದಲ್ಲಿರುವ ಭಾರತೀಯ ದೂತಾವಾಸವು ನೈಜೀರಿಯಾ ಹಾಗೂ ಬೆನಿನ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ವಿದೇಶ ವ್ಯವಹಾರ ಇಲಾಖೆ ತಿಳಿಸಿದೆ.

ಮುಂಬೈ ಮೂಲದ ಆಂಗ್ಲೊ ಈಸ್ಟರ್ನ್ ಶಿಪ್ಪಿಂಗ್ ಸಂಸ್ಥೆಯ ಒಡೆತನದಲ್ಲಿರುವ ವ್ಯಾಪಾರಿ ಹಡಗು ಗಿನಿಯಾ ಕೊಲ್ಲಿಯಲ್ಲಿರುವ ಬೆನಿನ್ ಕರಾವಳಿಯಲ್ಲಿ ನಾಪತ್ತೆಯಾಗಿರುವುದೆಂದು ಊಹಿಸಲಾಗಿದೆ. ಹಡಗಿನಲ್ಲಿ 22 ಭಾರತೀಯರಿದ್ದರು ಎಂದು ವಿದೇಶ ವ್ಯವಹಾರ ಇಲಾಖೆಯ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

  ಹಡಗನ್ನು ಪತ್ತೆಹಚ್ಚಿ ರಕ್ಷಿಸುವ ಕಾರ್ಯದ ಬಗ್ಗೆ ನೈಜೀರಿಯಾದ ಅಬುಜಾದಲ್ಲಿರುವ ಭಾರತೀಯ ದೂತಾವಾಸವು ಬೆನಿನ್ ಹಾಗೂ ನೈಜೀರಿಯಾದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲಿದೆ. ಕಾಣೆಯಾದವರ ಮಾಹಿತಿಗಾಗಿ 24 ಗಂಟೆ ಕಾರ್ಯನಿರ್ವಹಿಸುವ ಹೆಲ್ಪ್‌ಲೈನ್ + 234- 9070343860 ಆರಂಭಿಸಲಾಗಿದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News