ಭಾರತದ ಜೊತೆಗಿನ ಸ್ನೇಹಕ್ಕೆ ಗೌರವ: ಚೀನಾ

Update: 2018-02-03 17:29 GMT

ಬೀಜಿಂಗ್, ಜ. 3: ಭಾರತದೊಂದಿಗೆ ಉತ್ತಮ ನೆರೆಹೊರೆ ಬಾಂಧವ್ಯ ಮತ್ತು ಸ್ನೇಹವನ್ನು ಚೀನಾ ಯಾವತ್ತೂ ಗೌರವಿಸುತ್ತದೆ, ಆದರೆ, ಅದೇ ವೇಳೆ, ತನ್ನ ಸಾರ್ವಭೌಮ ಹಕ್ಕುಗಳು, ಹಿತಾಸಕ್ತಿಗಳು ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಎತ್ತಿಹಿಡಿಯಲು ದೃಢ ನಿರ್ಧಾರ ಮಾಡಿದೆ ಎಂದು ಚೀನಾ ವಿದೇಶ ಸಚಿವ ವಾಂಗ್‌ಯಿ ಶನಿವಾರ ಹೇಳಿದ್ದಾರೆ.

ಡೋಕಾ ಲಾ ಬಿಕ್ಕಟ್ಟನ್ನು ಚೀನಾ ‘ಸಂಯಮದಿಂದ’ ನಿಭಾಯಿಸಿದೆ ಹಾಗೂ ಭಾರತದೊಂದಿಗಿನ ಬಾಂಧವ್ಯಕ್ಕೆ ಚೀನಾ ನೀಡುತ್ತಿರುವ ಮಹತ್ವವನ್ನು ತೋರಿಸುತ್ತದೆ ಎಂದರು.

‘ಚೈನೀಸ್ ಇಂಟರ್‌ನ್ಯಾಶನಲ್ ಸ್ಟಡೀಸ್’ ಪತ್ರಿಕೆಯಲ್ಲಿ ಪ್ರಕಟಗೊಂಡ ಸುದೀರ್ಘ ಲೇಖನವೊಂದರಲ್ಲಿ ಅವರು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News