×
Ad

ಮಧ್ಯಪ್ರದೇಶ ಸರಕಾರದ ವಿರುದ್ಧ ಯಶ್ ವಂತ್ ಸಿನ್ಹಾ ಪ್ರತಿಭಟನೆ: ಕೈ ಜೋಡಿಸಿದ ‘ಆಪ್’

Update: 2018-02-04 21:47 IST

ಭೋಪಾಲ್, ಫೆ.4: ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಸಂತುಷ್ಟ ಹಿರಿಯ ಬಿಜೆಪಿ ಮುಖಂಡ ಯಶ್ ವಂತ್ ಸಿನ್ಹಾ ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲಾಧಿಕಾರಿಯ ಕಚೇರಿಯೆದುರು ಹಮ್ಮಿಕೊಂಡಿರುವ ಧರಣಿ ಮುಷ್ಕರಕ್ಕೆ ಆಮ್ ಆದ್ಮಿ ಪಕ್ಷ(ಆಪ್)ದ ಮಧ್ಯಪ್ರದೇಶ ಘಟಕ ಸಾಥ್ ನೀಡಿದೆ.

  ನರಸಿಂಗ್‌ಪುರದಲ್ಲಿ ಆರಂಭವಾಗಲಿರುವ ಕಲ್ಲಿದ್ದಲು ಆಧಾರಿತ ವಿದ್ಯುತ್ ಯೋಜನೆಯಿಂದ ನಿರ್ವಸಿತರಾಗುವ ರೈತರಿಗೆ ಸೂಕ್ತ ಉದ್ಯೋಗದ ಬೇಡಿಕೆಯೂ ಸೇರಿದಂತೆ ಹಲವು ಬೇಡಿಕೆಗಳನ್ನು ರಾಜ್ಯದ ಆಡಳಿತಾರೂಢ ಬಿಜೆಪಿ ಸರಕಾರದ ಮುಂದಿರಿಸಿ ತಮ್ಮ ‘ರಾಷ್ಟ್ರಮಂಚ್’ ವೇದಿಕೆಯ ಮೂಲಕ ಫೆ.1ರಿಂದ ಯಶವಂತ್ ಸಿನ್ಹಾ ಧರಣಿ ಪ್ರತಿಭಟನೆ ನಡೆಸುತ್ತಿದ್ದಾರೆ. “ನಾವು ಯಶವಂತ್ ಸಿನ್ಹಾರೊಂದಿಗೆ ಸೇರಿ ಧರಣಿ ಮುಷ್ಕರ ನಡೆಸುತ್ತೇವೆ. ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಮಧ್ಯಪ್ರದೇಶದ ಬಿಜೆಪಿ ಸರಕಾರದ ಅಣಕು ಶವಯಾತ್ರೆಯನ್ನು ನಮ್ಮ ಪಕ್ಷ ನಡೆಸಿದೆ” ಎಂದು ಆಪ್‌ನ ರಾಜ್ಯ ಸಂಯೋಜಕ ಅಲೋಕ್ ಅಗರ್‌ವಾಲ್ ತಿಳಿಸಿದ್ದಾರೆ. ಬಿಜೆಪಿಯ ಇನ್ನೋರ್ವ ಹಿರಿಯ ಮುಖಂಡ ಶತ್ರುಘ್ನ ಸಿನ್ಹಾ ಕೂಡಾ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News