ಆರೆಸ್ಸೆಸ್ ಶಾಖೆಗೆ ಹೋಗದವರು ಹಿಂದೂಗಳಲ್ಲ: ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕ

Update: 2018-02-05 15:26 GMT

ಭೋಪಾಲ್ , ಫೆ.5: ಆರೆಸ್ಸೆಸ್ ಶಾಖೆಗೆ ಹೋಗದವರು ಹಿಂದೂಗಳಲ್ಲ ಎಂದು ಹೈದರಾಬಾದ್ ನ ಬಿಜೆಪಿ ಶಾಸಕ ರಾಜಾಸಿಂಗ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶಾಸಕರ ಈ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿದೆ.

ನೀಮುಚ್ ನಲ್ಲಿ ಹಿಂದೂ ಉತ್ಸವ್ ಸಮಿತಿ ಹಮ್ಮಿಕೊಂಡಿದ್ದ ಧರ್ಮ ಸಭೆಯಲ್ಲಿ ಮಾತನಾಡಿದ ಅವರು, "ಪ್ರತಿಯೊಬ್ಬ ಹಿಂದು ಆರೆಸ್ಸೆಸ್ ಶಾಖೆಗೆ ಸೇರಬೇಕು. ಆರೆಸ್ಸೆಸ್ ಶಾಖೆಯಲ್ಲಿರುವವರು ರಾಷ್ಟ್ರೀಯವಾದಿಗಳು. ಆರೆಸ್ಸೆಸ್ ಶಾಖೆಯಲ್ಲಿರುವವರು ದೇಶದ ಹಾಗು ಧರ್ಮದ ಒಳಿತಿಗಾಗಿಯೂ ಕೆಲಸ ಮಾಡುತ್ತಾರೆ ಎಂದು ನಾನು ನಂಬುತ್ತೇನೆ” ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಕ್ಷಿ ಮಹಾರಾಜ್ ಮಾತನಾಡಿ, ಇಲ್ಲಿ ಹಲವು ರಾಜಕೀಯ ಪಕ್ಷಗಳಿದ್ದು, ಸಿದ್ಧಾಂತಗಳಲ್ಲಿ ವ್ಯತ್ಯಾಸಗಳಿವೆ. ಆದರೆ ನಾವೆಲ್ಲಾ ಹಿಂದೂಗಳು. ನಿಮಗೆ ಶಾಸಕರ, ಸಂಸದರ ಮೇಲೆ ಕೋಪವಿರಬಹುದು. ಆದರೆ ಅದಕ್ಕಾಗಿ ಭಾರತ ಮಾತೆ ಹಾಗು ಪ್ರಧಾನಿ ಮೋದಿಯವರನ್ನು ಶಿಕ್ಷಿಸಬೇಡಿ ಎಂದರು.

ರಾಜಾ ಸಿಂಗ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಯುವ ಕಾಂಗ್ರೆಸ್ ನಾಯಕ ಹಾಗು ರೈತನಾಯಕ ರಮೇಶ್ ರಾಜೊರಾ, “ಯಾರು ಹಿಂದೂ ಮತ್ತು ಯಾರು ಹಿಂದೂ ಅಲ್ಲ ಎಂದು ಹೇಳುವ ಹಕ್ಕು ಅವರಿಗಿಲ್ಲ. ಹಿಂದೂ ಕುಟುಂಬವೊಂದರಲ್ಲಿ ಜನಿಸಿದ ವ್ಯಕ್ತಿ ಹಿಂದೂ ಆಗಿರುತ್ತಾನೆ. ಅದಕ್ಕಾಗಿ ಆರೆಸ್ಸೆಸ್ ಪ್ರಮಾಣಪತ್ರದ ಅಗತ್ಯವಿಲ್ಲ” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News