ರಣಜಿ ಚಾಂಪಿಯನ್ ವಿದರ್ಭಕ್ಕೆ ರೋಚಕ ಜಯ
ಸಿಕಂದರಾಬಾದ್, ಫೆ.5: ರಣಜಿ ಟ್ರೋಫಿ ಚಾಂಪಿಯನ್ ವಿದರ್ಭ ತಂಡ ಜಾರ್ಖಂಡ್ ವಿರುದ್ಧದ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ 7 ರನ್‌ಗಳ ರೋಚಕ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ವಿದರ್ಭ ತಂಡ ಜಿತೇಶ್ ಶರ್ಮ(79) ಹಾಗೂ ರಾಮಸ್ವಾಮಿ(77) ಎರಡನೇ ವಿಕೆಟ್‌ಗೆ ಸೇರಿಸಿದ 116 ರನ್ ಜೊತೆಯಾಟ ಹಾಗೂ ಅಪೂರ್ವ್ ಅರ್ಧಶತಕ(57)ಕೊಡುಗೆಯ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 300 ರನ್ ಗಳಿಸಿ ಆಲೌಟಾಯಿತು. ರಾಹುಲ್ ಶುಕ್ಲಾ(4-52) ಯಶಸ್ವಿ ಬೌಲರ್ ಎನಿಸಿಕೊಂಡರು.
ಗೆಲ್ಲಲು ಕಠಿಣ ಸವಾಲು ಪಡೆದ ಜಾರ್ಖಂಡ್ ಗೆಲುವಿನ ಹೊಸ್ತಿಲಲ್ಲಿ ಎಡವಿತು. ಸೌರಭ್ ತಿವಾರಿ(65), ಕುಮಾರ್(60) ಹಾಗೂ ವಿಕಾಸ್ ಸಿಂಗ್(50) ಕೊಡುಗೆ ನೆರವಿನಿಂದ ಜಾರ್ಖಂಡ್ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 293 ರನ್ ಗಳಿಸಿತು. ಕೇವಲ 7 ರನ್‌ನಿಂದ ಗೆಲುವು ವಂಚಿತವಾಯಿತು.
ಭಾರತದ ಬೌಲರ್ ಉಮೇಶ್ ಯಾದವ್(2-69), ರಣಜಿಯಲ್ಲಿ ಮಿಂಚಿರುವ ರಜನೀಶ್ ಗುರ್ಬಾನಿ(2-52) ಹಾಗೂ ಯಶ್ ಠಾಕೂರ್(2-45) ಜಾರ್ಖಂಡ್‌ಗೆ ಗೆಲುವು ನಿರಾಕರಿಸಿದರು.