×
Ad

ಡೇವಿಸ್ ಕಪ್: ಫ್ರಾನ್ಸ್ ಕ್ವಾರ್ಟರ್ ಫೈನಲ್ ಗೆ

Update: 2018-02-05 23:54 IST

ಪ್ಯಾರಿಸ್, ಫೆ.5: ಹಾಲಿ ಚಾಂಪಿಯನ್ ಫ್ರಾನ್ಸ್ ತಂಡ ಹಾಲೆಂಡ್ ತಂಡವನ್ನು 3-1 ರಿಂದ ಮಣಿಸುವ ಮೂಲಕ ಡೇವಿಸ್ ಕಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದೆ. ಫ್ರಾನ್ಸ್ ತಂಡ ತವರು ನೆಲದಲ್ಲಿ ಆಡಿರುವ 9 ಪಂದ್ಯಗಳಲ್ಲಿ 8ನೇ ಜಯ ದಾಖಲಿಸಿತು. ಆಡ್ರಿಯನ್ ಮನ್ನಾರಿಯೊ ಹಾಲೆಂಡ್‌ನ ರಾಬಿನ್ ಹಾಸೆ ವಿರುದ್ಧ ಮೊದಲ ರಿವರ್ಸ್ ಸಿಂಗಲ್ಸ್ ಪಂದ್ಯದಲ್ಲಿ 4-6, 7-6(5), 7-5, 6-7(2), 7-5 ಸೆಟ್‌ಗಳಿಂದ ಜಯ ಸಾಧಿಸಿದ್ದಾರೆ.

ಸ್ಪೇನ್ ತಂಡ ಬ್ರಿಟನ್ ತಂಡವನ್ನು 3-1 ರಿಂದ ಮಣಿಸಿ ಕ್ವಾರ್ಟರ್‌ಫೈನಲ್ ತಲುಪಿದ್ದು ಮುಂದಿನ ಸುತ್ತಿನಲ್ಲಿ ಜರ್ಮನಿ ತಂಡವನ್ನು ಎದುರಿಸಲಿದೆ.

ಅಲೆಕ್ಸಾಂಡರ್ ಝ್ವೆರೆವ್ ನೇತೃತ್ವದ ಜರ್ಮನಿ ತಂಡ ಆಸ್ಟ್ರೇಲಿಯವನ್ನು 3-1 ರಿಂದ ಸೋಲಿಸುವುದರೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಝ್ವೆರೆವ್ ಆಸ್ಟ್ರೇಲಿಯದ ನಿಕ್ ಕಿರ್ಗಿಯೊಸ್‌ರನ್ನು 6-2, 7-6(3), 6-2 ಸೆಟ್‌ಗಳಿಂದ ಮಣಿಸಿ ಜರ್ಮನಿ ಅಂತಿಮ-8ರ ಸುತ್ತು ತಲುಪಲು ನೆರವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News