ಹೂಬಿಟ್ಟ ಬಾಳೆಗೊನೆ!

Update: 2018-02-07 08:58 GMT

ಮಂಗಳೂರು, ಫೆ.7: ಬಾಳೆಗೊನೆ ಹಾಕುವ ವೇಳೆ ಬಾಳೆಕಾಯಿಯ ತುದಿಯಲ್ಲಿ ಹೂವು ಕಾಣಿಸಿಕೊಳ್ಳುತ್ತದೆ. ಬಾಳೆ ಕಾಯಿಗಳು ಗೊನೆಯಲ್ಲಿ ಕೊನೆಗೊಳ್ಳುತ್ತಿದ್ದಂತೆಯೇ ಈ ಹೂವು ಮಧುರವಾದ ಜೇನಿನೊಂದಿಗೆ ಅರಳಿ ಬಳಿಕ ಉದುರಿ ಹೋಗುತ್ತವೆ. ಗೊನೆಯ ಕೊನೆಯಲ್ಲಿ ಕಡು ನೇರಳ ಬಣ್ಣದ ಹೂವು (ತುಳುವಿನಲ್ಲಿ ಪೂಂಬೆ) ಉಳಿದು ಬಿಡುತ್ತದೆ. ತುಳುನಾಡಿನಲ್ಲಿ ಸಾಮಾನ್ಯವಾಗಿ ಬಾಳೆ ಗೊನೆಯ ತುದಿಯಲ್ಲಿ ಉಳಿಯುವ ಹೂವನ್ನು ಅಡುಗೆಯಲ್ಲಿಯೂ ಬಳಸುತ್ತಾರೆ. ಇದು ಬಾಳೆಗಿಡದಲ್ಲಿ ಸಾಮಾನ್ಯವಾಗಿ ಕಾಣಬಹುದು.

ಆದರೆ ಬಜ್ಪೆ ಜರಿನಗರದ ಅಬ್ದುಲ್ ಖಾದರ್ ಅವರ ಮನೆಯ ಹಿತ್ತಲಲ್ಲಿ ನೆಟ್ಟಿದ್ದ ಬಾಳೆ ಗಿಡವು ಗೊನೆ ಹಾಕಿದ್ದು, ಅದರಲ್ಲಿ ಕಿರಿದಾದ ಬಾಳೆ ಕಾಯಿಯ ಜತೆಗೆ ಬಿಳಿ ಬಣ್ಣದ ಹೂವು ಗೋಚರಿಸಿ ಅಚ್ಚರಿಸಿ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News