ಫೆ.8ರಿಂದ ಬಿ.ಸಿ.ರೋಡ್-ಬೆಂಗಳೂರು ನಡುವೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ಪ್ರಾರಂಭ

Update: 2018-02-07 10:56 GMT

ಬಂಟ್ವಾಳ, ಫೆ.7: ಕೆಎಸ್ಸಾರ್ಟಿಸಿಯ ಪುತ್ತೂರು ವಿಭಾಗದ ಬಿ.ಸಿ.ರೋಡ್ ಘಟಕದಿಂದ ಬಿ.ಸಿ.ರೋಡ್-ಬೆಂಗಳೂರು ನಾನ್ ಎಸಿ ಸ್ಲೀಪರ್ ಬಸ್‌ಗಳ ಸಂಚಾರ ಫೆ.8ರಿಂದ ಆರಂಭವಾಗಲಿದೆ.

ಇಂದು ಬೆಳಗ್ಗೆ 9:30ಕ್ಕೆ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡುವರು.

ಉಪ್ಪಿನಂಗಡಿ, ಪುತ್ತೂರು, ಸುಳ್ಯ ಮಡಿಕೇರಿ, ಕುಶಾಲನಗರ, ಅರಕಲಗೂಡು, ಹೊಳೆನರಸೀಪುರ, ಚನ್ನರಾಯಪಟ್ಟಣ, ಕುಣಿಗಲ್ ಮಾರ್ಗವಾಗಿ ಬಸ್ ತೆರಳಲಿದೆ. ಬಿ.ಸಿ.ರೋಡ್‌ನಿಂದ ರಾತ್ರಿ 9 ಗಂಟೆಗೆ ಹೊರಟು ಬೆಂಗಳೂರಿಗೆ 5ಕ್ಕೆ ತಲುಪಲಿದೆ. ಬೆಂಗಳೂರಿನಿಂದ ರಾತ್ರಿ ಗಂಟೆ 9.51ಕ್ಕೆ ಹೊರಟು ಬಿ.ಸಿ.ರೋಡ್ಗೆ ಬೆಳಗ್ಗೆ ಗಂಟೆ 5.51ಕ್ಕೆ ತಲುಪಲಿದೆ.

ಈ ಸಾರಿಗೆಗೆ ಆನ್‌ಲೈನ್ ಮೂಲಕ ಮುಂಗಡ ಬುಕ್ಕಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಕೆಎಸ್ಸಾರ್ಟಿಸಿಯ ಪುತ್ತೂರು ವಿಭಾಗ-ಬಿ.ಸಿ.ರೋಡ್ ಘಟಕ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News