ರಾಜ್ಯಸಭಾ ಟಿವಿಯನ್ನು ಬಿಜೆಪಿ-ಟಿವಿಯಾಗಿ ಪರಿವರ್ತಿಸದಿರಿ: ಕಾಂಗ್ರೆಸ್

Update: 2018-02-07 16:36 GMT

ಹೊಸದಿಲ್ಲಿ, ಫೆ. 7: ರಾಜ್ಯ ಸಭಾ ಟಿವಿ ಕವರೇಜ್ ನೀಡುವ ಸಂದರ್ಭ ಪ್ರತಿಪಕ್ಷಗಳ ಬಗ್ಗೆ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಬುಧವಾರ ಆರೋಪಿಸಿರುವ ಕಾಂಗ್ರೆಸ್, ಸದನವು ರಾಜ್ಯಸಭಾ ಟಿವಿಯನ್ನು ಬಿಜೆಪಿ ಟಿವಿಯನ್ನಾಗಿಸಬಾರದು ಎಂದಿದೆ.

ಇದು ಗಂಭೀರ ವಿಚಾರ. ರಾಜ್ಯ ಸಭಾ ಟಿವಿ ಎಲ್ಲ ರಾಜಕೀಯ ಪಕ್ಷಗಳಿಗೆ ಸೂಕ್ತ ಕವರೇಜ್ ನೀಡಬೇಕು. ಕೇವಲ 5 ನಿಮಿಷವಿದ್ದ ಡೆರೆಕ್ ಒಬ್ರಯಾನ್ ಅವರ ಭಾಷಣ ರಾಜ್ಯ ಸಭಾ ಟಿವಿಯಲ್ಲಿ ಪ್ರಸಾರವಾಗಿಲ್ಲ ಎಂದು ಅದು ಹೇಳಿದೆ.ಇದು ರಾಜ್ಯ ಸಭಾ ಟಿವಿ. ಬಿಜೆಪಿ ಟಿವಿಯಲ್ಲ ಎಂದು ರಾಜ್ಯ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಹೇಳಿದ್ದಾರೆ.

ರಾಷ್ಟ್ರಪತಿಯವರ ಭಾಷಣದ ಬಳಿಕ ಟಿಎಂಸಿ ಸದಸ್ಯ ಒಬ್ರಯಾನ್ ಅವರ ವಂದನಾ ನಿರ್ಣಯವನ್ನು ರಾಜ್ಯ ಸಭಾ ಟಿವಿ ಪ್ರಸಾರ ಮಾಡದಿರುವ ಹಿನ್ನೆಲೆಯಲ್ಲಿ ಆಜಾದ್ ಈ ಟೀಕೆ ಮಾಡಿದ್ದಾರೆ.

 ಸರ್ವ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ಮೂಲಕ ಈ ವಿಷಯದ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

‘‘ನಾನು ಸೋಮವಾರ ರಾತ್ರಿ ರಾಜ್ಯಸಭಾ ಟವಿ ನೋಡುತ್ತಿದ್ದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಾತನಾಡುವುದನ್ನು ಶೇ. 98ರಷ್ಟು ಪ್ರಸಾರ ಮಾಡಲಾಯಿತು. ಆದರೆ, ವಿಪಕ್ಷ ಸದಸ್ಯರ ನಿಲುವನ್ನು ಕೇವಲ 16 ಸೆಕೆಂಡ್ ಮಾತ್ರ ಪ್ರಸಾರ ಮಾಡಲಾಯಿತು.’’ ಎಂದು ಅವರು ಹೇಳಿದ್ದಾರೆ.

ಇದನ್ನು ಮಾಡಬೇಡಿ. ಎಲ್ಲ ಪಕ್ಷಗಳ ಪ್ರತಿನಿಧಿಗಳು ಒಳಗೊಂಡ ಸಮಿತಿ ಮೂಲಕ ಈ ವಿಷಯದ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಹೇಳಿದ್ದಾರೆ.

ಮಂಗಳವಾರ ಸಮಾಜವಾದಿ ಪಕ್ಷದ ಸದಸ್ಯ ನರೇಶ್ ಅಗರ್‌ವಾಲ್ ಕೂಡ ರಾಜ್ಯಸಭಾ ಟೀವಿ ಭಾರತೀಯ ಜನತಾ ಪಕ್ಷದ ಟಿವಿಯಾಗಿದೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News