ಮೋದಿಗೆ ‘ಗ್ರ್ಯಾಂಡ್ ಕಾಲರ್ ಆಫ್ ದ ಸ್ಟೇಟ್ ಆಫ್ ಫೆಲೆಸ್ತೀನ್’ ಗೌರವ

Update: 2018-02-10 15:47 GMT

ಹೊಸದಿಲ್ಲಿ, ಫೆ.10: ಭಾರತ ಹಾಗು ಫೆಲೆಸ್ತೀನ್ ನಡುವಣ ಸಂಬಂಧ ವೃದ್ಧಿಗೆ ನೀಡಿರುವ ಕೊಡುಗೆಗಾಗಿ ಪ್ರಧಾನಿ ಮೋದಿಯವರನ್ನು ‘ಗ್ರ್ಯಾಂಡ್ ಕಾಲರ್ ಆಫ್ ದ ಸ್ಟೇಟ್ ಆಫ್ ಫೆಲೆಸ್ತೀನ್’ ನೀಡಿ ಗೌರವಿಸಲಾಯಿತು.

ದ್ವಿಪಕ್ಷೀಯ ಮಾತುಕತೆಗಳ ನಂತರ ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಪ್ರಧಾನಿ ನರೇಂದ್ರ ಮೋದಿಯವರನ್ನು ಗೌರವಿಸಿದರು.

ಫೆಲೆಸ್ತೀನ್ ಗೆ ಭೇಟಿ ನೀಡಿರುವ ಪ್ರಪ್ರಥಮ ಪ್ರಧಾನಿಯಾಗಿದ್ದಾರೆ ಮೋದಿ. ಫೆಲೆಸ್ತೀನ್ ನಲ್ಲಿ ವಿದೇಶಿ ಗಣ್ಯರಿಗೆ ನೀಡಲಾಗುವ ಅತ್ಯುನ್ನತ ಗೌರವವಾಗಿದೆ ‘ಗ್ರ್ಯಾಂಡ್ ಕಾಲರ್’. ಸೌದಿ ಅರೇಬಿಯಾದ ಕಿಂಗ್ ಸಲ್ಮಾನ್, ಬಹರೈನ್ ನ ಕಿಂಗ್ ಹಾಮದ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ‘ಗ್ರ್ಯಾಂಡ್ ಕಾಲರ್’ ಗೌರವಕ್ಕೆ ಪಾತ್ರವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News