ಒಲಿಂಪಿಕ್ಸ್‌ನಲ್ಲಿ ಜೊತೆಯಾಗಿ ಕಾಣಿಸಿಕೊಂಡ ಟ್ರಂಪ್, ಕಿಮ್!

Update: 2018-02-10 16:33 GMT

ಪ್ಯಾಂಗ್‌ಚಾಂಗ್ (ದಕ್ಷಿಣ ಕೊರಿಯ), ಫೆ. 10: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಹಾವು-ಮುಂಗುಸಿಯಂತಿರುವ ಎದುರಾಳಿಗಳು. ಆದರೆ, ಅವರು ದಕ್ಷಿಣ ಕೊರಿಯದ ಪ್ಯಾಂಗ್‌ಚಾಂಗ್‌ನಲ್ಲಿ ಶುಕ್ರವಾರ ನಡೆದ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಪರಸ್ಪರ ಕೈಕುಲುಕಿದರು!

ಹಾಗಾದರೆ, ಅವರ ನಡುವಿನ ಉದ್ವಿಗ್ನತೆ ಕರಗಿತೇ?

ಹಾಗೇನೂ ಇಲ್ಲ. ಇಲ್ಲಿ ಕಾಣಿಸಿಕೊಂಡವರು ಉಭಯ ನಾಯಕರ ಪಡಿಯಚ್ಚುಗಳು.

ಕಿಮ್‌ರಂತೆ ಕಾಣಿಸುವ ಹೊವಾರ್ಡ್ ಎಕ್ಸ್ ಮತ್ತು ಟ್ರಂಪ್‌ರಂತೆ ಕಾಣಿಸುವ ಡೆನಿಸ್ ಅಲನ್ ಮಾಧ್ಯಮ ವಿಭಾಗಕ್ಕೆ ನುಸುಳಿ ಬಂದಾಗ ಎಲ್ಲರ ಆಕರ್ಷಣೆಯ ಕೇಂದ್ರವಾದರು.

ಆದರೆ, ಬಳಿಕ ಅವರನ್ನು ಭದ್ರತಾ ಸಿಬ್ಬಂದಿ ಅಲ್ಲಿಂದ ಹೊರಗೆ ಕರೆದುಕೊಂಡರು ಹೋದರು.

ಆದರೆ, ಉಭಯ ‘ನಾಯಕ’ರನ್ನು ಜೊತೆಗೆ ನೋಡಿ ರೋಮಾಂಚನಗೊಂಡ ಪ್ರೇಕ್ಷಕರು ಅವರನ್ನು ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News