ಸಿರಿಯದಲ್ಲಿ 30 ದಿನಗಳ ಯುದ್ಧವಿರಾಮ: ವಿಶ್ವಸಂಸ್ಥೆ ಪರಿಶೀಲನೆ

Update: 2018-02-10 16:41 GMT

ವಿಶ್ವಸಂಸ್ಥೆ, ಫೆ. 10: ಮಾನವೀಯ ನೆರವುಗಳನ್ನು ತಲುಪಿಸುವುದಕ್ಕಾಗಿ ಸಿರಿಯದಲ್ಲಿ 30 ದಿನಗಳ ಯುದ್ಧವಿರಾಮ ಕೋರುವ ಕರಡು ನಿರ್ಣಯವೊಂದನ್ನು ಮಂಡಿಸುವ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪರಿಶೀಲನೆ ನಡೆಸುತ್ತಿದೆ ಎಂದು ಎಎಫ್‌ಪಿ ವರದಿ ಮಾಡಿದೆ.

ಸ್ವೀಡನ್ ಮತ್ತು ಕುವೈತ್ ಈ ಕುರಿತ ಬೇಡಿಕೆಯನ್ನು ಮಂಡಿಸಿವೆ. ಸಿರಿಯದ ಪೂರ್ವ ಘೌಟ ನಗರಕ್ಕೆ ಸರಕಾರಿ ಪಡೆಗಳು ಹಾಕಿರುವ ಮುತ್ತಿಗೆ ಸೇರಿದಂತೆ ಎಲ್ಲ ಮುತ್ತಿಗೆಗಳನ್ನು ತೆರವುಗೊಳಿಸಬೇಕೆಂಬ ಬೇಡಿಕೆಯನ್ನೂ ಮುಂದಿಡಲಾಗಿದೆ.

ಪೂರ್ವ ಘೌಟದ ಮೇಲೆ ಸರಕಾರಿ ಪಡೆಗಳು 5 ದಿನಗಳ ಅವಧಿಯಲ್ಲಿ ನಡೆಸಿರುವ ದಾಳಿಗಳಲ್ಲಿ 240ಕ್ಕೂ ಅಧಿಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News