ದಿಗ್ಬಂಧನದಿಂದಾಗಿ ವಿಶ್ವಸಂಸ್ಥೆಗೆ ಹಣ ಪಾವತಿ ಸಾಧ್ಯವಿಲ್ಲ: ಉ. ಕೊರಿಯ

Update: 2018-02-10 17:06 GMT

ವಿಶ್ವಸಂಸ್ಥೆ, ಫೆ. 10: ವಿಶ್ವಸಂಸ್ಥೆಯ ದಿಗ್ಬಂಧನಗಳ ಹಿನ್ನೆಲೆಯಲ್ಲಿ, ಪ್ಯಾಂಗ್‌ಯಾಂಗ್‌ನಿಂದ ಹಣ ಹಸ್ತಾಂತರ ಅಸಾಧ್ಯವಾಗಿದ್ದು, ವಿಶ್ವಸಂಸ್ಥೆಗೆ ತಾನು ನೀಡಬೇಕಾಗಿರುವ 1,84,000 ಡಾಲರ್ (ಸುಮಾರು 1.18 ಕೋಟಿ ರೂಪಾಯಿ) ಮೊತ್ತವನ್ನು ಪಾವತಿಸಲು ಸಾಧ್ಯವಿಲ್ಲ ಎಂದು ಉತ್ತರ ಕೊರಿಯ ಹೇಳಿದೆ.

ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯ (ಡಿಪಿಆರ್‌ಕೆ)ದ ವಿದೇಶಿ ವ್ಯಾಪಾರ ಬ್ಯಾಂಕ್‌ನ ಮೇಲೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಆಗಸ್ಟ್‌ನಲ್ಲಿ ದಿಗ್ಬಂಧನ ವಿಧಿಸಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಗೆ ಹಣಪಾವತಿ ಅಸಾಧ್ಯವಾಗಿದೆ ಎಂದು ವಿಶ್ವಸಂಸ್ಥೆಯಲ್ಲಿರುವ ಉತ್ತರ ಕೊರಿಯದ ರಾಯಭಾರ ಕಚೇರಿ ಹೇಳಿದೆ.

ವಿದೇಶಿ ವ್ಯಾಪಾರ ಬ್ಯಾಂಕ್ ಅಂತಾರಾಷ್ಟ್ರೀಯ ವ್ಯವಹಾರಗಳ ಉಸ್ತುವಾರಿ ಹೊಂದಿದೆ.

ಜುಲೈ 3 ಮತ್ತು ಜುಲೈ 27ರಂದು ಉತ್ತರ ಕೊರಿಯವು ಅಮೆರಿಕವನ್ನು ತಲುಪಬಲ್ಲ ಖಂಡಾಂತರ ಪ್ರಕ್ಷೇಪಕ ಕ್ಷಿಪಣಿಗಳನ್ನು ಯಶಸ್ವಿಯಾಗಿ ಹಾರಾಟ ನಡೆಸಿದ ಬಳಿಕ, ಉತ್ತರ ಕೊರಿಯದ ವಿದೇಶಿ ವ್ಯಾಪಾರ ಬ್ಯಾಂಕ್‌ನ ಮೇಲೆ ಭದ್ರತಾ ಮಂಡಳಿ ದಿಗ್ಬಂಧನಗಳನ್ನು ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News