ಆಫ್ರಿಕದ ತಂಡದ ಗೆಲುವಿಗೆ 290 ರನ್‌ಗಳ ಸವಾಲು
ಜೋಹಾನ್ಸ್‌ಬರ್ಗ್, ಫೆ.10: ಆರಂಭಿಕ ದಾಂಡಿಗ ಶಿಖರ್ ಧವನ್ ಅವರ ಶತಕ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ಆಕರ್ಷಕ 75 ರನ್‌ಗಳ ನೆರವಿನಲ್ಲಿ ಭಾರತ ತಂಡ ನಾಲ್ಕನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ತಂಡಕ್ಕೆ ಗೆಲುವಿಗೆ ಕಠಿಣ ಸವಾಲು ವಿಧಿಸಿದೆ.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 289 ರನ್ ಗಳಿಸಿತು.
ಶಿಖರ್ ಧವನ್ ಜೊತೆ ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ (5) ಬೇಗನೆ ಔಟಾದರು. ಬಳಿಕ ಭಾರತದ ಇನಿಂಗ್ಸ್‌ನ್ನು ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಮುಂದುವರಿಸಿದರು.
ಧವನ್ ಸೊಗಸಾದ ಶತಕ ದಾಖಲಿಸಿದರು. ಆದರೆ ವಿರಾಟ್ ಕೊಹ್ಲಿ 75 ರನ್ (83ಎ, 7ಬೌ,1ಸಿ) ಗಳಿಸಿ ಔಟಾದರು. ಧವನ್ ಮತ್ತು ಕೊಹ್ಲಿ ಎರಡನೇ ವಿಕೆಟ್‌ಗೆ 158 ರನ್‌ಗಳ ಜೊತೆಯಾಟ ನೀಡಿದರು. 31 ಓವರ್‌ಗಳಲ್ಲಿ ತಂಡದ ಸ್ಕೋರ್‌ನ್ನು 178ಕ್ಕೆ ಏರಿಸಿದರು. 32ನೇ ಓವರ್‌ನ ಮೊದಲ ಎಸೆತದಲ್ಲಿ ಕೊಹ್ಲಿ ಅವರು ಮೊರೀಸ್ ಎಸೆತದಲ್ಲಿ ಮಿಲ್ಲರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಕೊಹ್ಲಿ 56 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಧವನ್ ಶತಕ ದಾಖಲಿಸಿದ ಬಳಿಕ ಸ್ವಲ್ಪ ಹೊತ್ತು ಮಳೆ ಆಟಕ್ಕೆ ಅಡ್ಡಿಪಡಿಸಿತು. ಧವನ್ 109 ರನ್ ಗಳಿಸಿ ಮೊರ್ಕೆಲ್‌ಗೆ ವಿಕೆಟ್ ಒಪ್ಪಿಸಿದರು.
ಅಜಿಂಕ್ಯ ರಹಾನೆ (8) ಮತ್ತು ಹಾರ್ದಿಕ್ ಪಾಂಡ್ಯ(9)ವಿಫಲರಾದರು. ಮಹೇಂದ್ರ ಸಿಂಗ್ ಧೋನಿ ಔಟಾಗದೆ 42 ರನ್(43ಎ, 3ಬೌ,1ಸಿ) ಗಳಿಸಿದರು.