ಝಿಂಬಾಬ್ವೆ ವಿರುದ್ಧ ಅಫ್ಘಾನಿಸ್ತಾನಕ್ಕೆ ಭರ್ಜರಿ ಜಯ

Update: 2018-02-10 18:06 GMT

ಶಾರ್ಜಾ, ಫೆ.10: ರಹ್ಮತ್ ಶಾ ದಾಖಲಿಸಿದ ಜೀವನ ಶ್ರೇಷ್ಠ 114 ರನ್‌ಗಳ ನೆರವಿನಲ್ಲಿ ಅಫ್ಘಾನಿಸ್ತಾನ ತಂಡ ಇಲ್ಲಿ ನಡೆದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಝಿಂಬಾಬ್ವೆ ವಿರುದ್ಧ 154 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಅಫ್ಘಾನಿಸ್ತಾನಕ್ಕೆ ಈ ಗೆಲುವು ಮುಂದಿನ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಅತ್ಯಂತ ಮಹತ್ವದ್ದಾಗಿದೆ.

 ರಹ್ಮತ್ ಶಾ ಅವರು 110 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 114 ರನ್ ಗಳಿಸಿದ್ದರು. ಶಾ ಶತಕ , ನಜೀಬುಲ್ಲಾ ಝದ್ರಾನ್ ಔಟಾಗದೆ 81ರನ್(51ಎ, 5ಬೌ,5ಸಿ), ಇಸಾನುಲ್ಲಾ 54 ರನ್(53ಎ, 9ಬೌ) ನೆರವಿನಲ್ಲಿ ಅಫ್ಘಾನಿಸ್ತಾನ ತಂಡ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 333 ರನ್ ಗಳಿಸಿತ್ತು.

ಗೆಲುವಿಗೆ 334 ರನ್‌ಗಳ ಕಠಿಣ ಸವಾಲು ಪಡೆದ ಝಿಂಬಾಬ್ವೆ ತಂಡ 34.4 ಓವರ್‌ಗಳಲ್ಲಿ 179 ರನ್‌ಗಳಿಗೆ ಆಲೌಟಾಗಿದೆ.

 ಅಫ್ಘಾನಿಸ್ತಾನದ 19ರ ಹರೆಯದ ರಶೀದ್ ಖಾನ್ ಅವರು 26ಕ್ಕೆ 4 ವಿಕೆಟ್ ಉಡಾಯಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 16ರ ಹರೆಯದ ಲೆಗ್ ಸ್ಪಿನ್ನರ್ ಮುಜೀಬ್ ಯುರ್ರಾನ್ ತಂಡದ ಬೌಲಿಂಗ್ ದಾಳಿ ಆರಂಭಿಸಿ 41ಕ್ಕೆ 2 ವಿಕೆಟ್ ಉಡಾಯಿಸಿದರು. ಅಫ್ಘಾನಿಸ್ತಾನದ ಸಂಘಟಿತ ಬೌಲಿಂಗ್ ದಾಳಿಯ ಮುಂದೆ ಝಿಂಬಾಬ್ವೆ ತಂಡದ ಬ್ಯಾಟಿಂಗ್ ಸೊರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News