ತ್ರಿಕೋನ ಟ್ವೆಂಟಿ-20 ಸರಣಿ: ಆಸ್ಟ್ರೇಲಿಯಕ್ಕೆ ಗೆಲುವು

Update: 2018-02-10 18:08 GMT

ಮೆಲ್ಬೋರ್ನ್, ಫೆ.10: ಇಂಗ್ಲೆಂಡ್ ವಿರುದ್ಧ ತ್ರಿಕೋನ ಟ್ವೆಂಟಿ-20 ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯ 7 ವಿಕೆಟ್‌ಗಳ ಜಯ ಗಳಿಸಿದೆ.

ಗೆಲುವಿಗೆ 138 ರನ್‌ಗಳ ಸವಾಲನ್ನು ಪಡೆದ ಆಸ್ಟ್ರೇಲಿಯ ತಂಡ 14.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 138 ರನ್ ಗಳಿಸಿತು. ಇದರೊಂದಿಗೆ ಆಸ್ಟ್ರೇಲಿಯ ಸತತ ಮೂರು ಪಂದ್ಯಗಳಲ್ಲಿ ಜಯ ಗಳಿಸಿದೆ.

   ಆಸ್ಟ್ರೇಲಿಯ ತಂಡ ಗ್ಲೆನ್ ಮ್ಯಾಕ್ಸ್‌ವೆಲ್ (39) ಶೋರ್ಟ್ (36), ಲಿನ್(31) ಮತ್ತು ಆ್ಯರೊನ್ ಫಿಂಚ್(ಔಟಾಗದೆ 20) ಗಳಿಸಿ ಆಸ್ಟ್ರೇಲಿಯವನ್ನು ಗೆಲುವಿನ ದಡ ಸೇರಿಸಿದರು.

  ಆಸ್ಟ್ರೇಲಿಯ ಮೊದಲ ಓವರ್‌ನ ಎರಡನೇ ಎಸೆತದಲ್ಲಿ ಆರಂಭಿಕ ದಾಂಡಿಗ ಮತ್ತು ನಾಯಕ ಡೇವಿಡ್ ವಾರ್ನರ್ (2) ವಿಕೆಟ್ ಕಳೆದುಕೊಂಡಿತ್ತು. ಎರಡನೇ ವಿಕೆಟ್‌ಗೆ ಲಿನ್ ಮತ್ತು ಶೋರ್ಟ್ ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿದರು. ಅವರು ಎರಡನೇ ವಿಕೆಟ್‌ಗೆ 49 ರನ್‌ಗಳ ಕೊಡುಗೆ ನೀಡಿದರು. ಲಿನ್ 31 ರನ್ ಗಳಿಸಿ ಔಟಾದರು. ನಾಲ್ಕನೇ ವಿಕೆಟ್‌ಗೆ ಶೋರ್ಟ್ ಮತ್ತು ಫಿಂಚ್ ಮುರಿಯದ ಜೊತೆಯಾಟದಲ್ಲಿ 65 ರನ್ ಸೇರಿಸಿ ತಂವನ್ನು ಗೆಲುವಿನ ದಡ ಸೇರಿಸಿದರು.

 ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಇಂಗ್ಲೆಂಡ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 137 ರನ್ ಗಳಿಸಿತ್ತು.

ನಾಯಕ ಜೋ ಬಟ್ಲರ್ (46) ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News