ಪಿಂಕ್ ಜರ್ಸಿ ಧರಿಸಿ ಕಣಕ್ಕಿಳಿದ ಹರಿಣ ಪಡೆ

Update: 2018-02-10 18:14 GMT

ಜೊಹಾನ್ಸ್‌ಬರ್ಗ್, ಫೆ.10: ಭಾರತ ವಿರುದ್ಧದ ನಾಲ್ಕನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕದ ಆಟಗಾರರು ಪಿಂಕ್ ಜರ್ಸಿ ಧರಿಸಿ ಇಂದು ಕ್ರೀಡಾಂಗಣಕ್ಕಿಳಿದರು. ವಾಂಡರರ್ಸ್‌ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಭಾರತ ಬ್ಯಾಟಿಂಗ್ ಆಯ್ದುಕೊಂಡಾಗ ದಕ್ಷಿಣ ಆಫ್ರಿಕದ ಆಟಗಾರರು ಪಿಂಕ್ ವಸ್ತ್ರ ಧರಿಸಿ ಕ್ರೀಡಾಂಗಣಕ್ಕೆ ಇಳಿದರು. ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಮತ್ತು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ನೆರವು ನೀಡಲು ಈ ಪಂದ್ಯವನ್ನು ಪಿಂಕ್ ಡೆ ಏಕದಿನ ಪಂದ್ಯವೆಂದು ದಕ್ಷಿಣ ಆಫ್ರಿಕ ಘೋಷಿಸಿತ್ತು.

 2011ರಲ್ಲಿ ಮೊದಲ ಬಾರಿ ಇಂತಹ ಮೊದಲ ಏಕದಿನ ಪಂದ್ಯ ನಡೆದಿತ್ತು. ಇಂದು 6ನೇ ಬಾರಿ ದಕ್ಷಿಣ ಆಫ್ರಿಕ ಪಿಂಕ್ ಡೇ ಪಂದ್ಯವನ್ನಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News