×
Ad

ಅಂಕಿತಾ, ಕರ್ಮನ್ ಕೌರ್‌ಗೆ ಜಯ

Update: 2018-02-10 23:46 IST

ಹೊಸದಿಲ್ಲಿ, ಫೆ.10: ಫೆಡ್ ಕಪ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಭಾರತದ ಅಂಕಿತಾ ರೈನಾ ಮತ್ತು ಕರ್ಮನ್ ಕೌರ್ ಜಯ ಗಳಿಸಿದ್ದಾರೆ.

 ಕರ್ಮನ್ ಕೌರ್ ಮತ್ತು ಅಂಕಿತಾ ಅವರು ಭಾರತಕ್ಕೆ 2-0 ಗೆಲುವಿನೊಂದಿಗೆ ಏಷ್ಯಾ /ಓಶಿಯಾನಿಯಾ ಗ್ರೂಪ್-1ರಲ್ಲಿ ಅವಕಾಶ ದೃಢಪಡಿಸಿದ್ದಾರೆ. ಕರ್ಮನ್ ಕೌರ್ ಅವರು ಚೀನಾ ತೈಪೆಯ ಲೀ ಪೇ ಚಿ ವಿರುದ್ಧ 7-6(4), 6-3 ಅಂತರದಲ್ಲಿ ಜಯ ಗಳಿಸಿ ಭಾರತಕ್ಕೆ 1-0 ಮುನ್ನಡೆ ಸಾಧಿಸಲು ನೆರವಾದರು. ಅಂಕಿತಾ ಅವರು ಚೀಹ್ ಯು ಹಿಸು ವಿರುದ್ಧ 6-4, 5-7, 6-1 ಅಂತರದಲ್ಲಿ ಜಯ ಸಾಧಿಸಿದರು. ಅಂಕಿತಾ ಅವರು 2 ಗಂಟೆ ಮತ್ತು 54 ನಿಮಿಷಗಳ ಕಾಲ ಹೋರಾಟ ನಡೆಸಿ ಎದುರಾಳಿ ಚೀಹ್ ಅವರಿಗೆ ಸೋಲುಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News