ಅಜ್ಜಿನಡ್ಕ: ಫೆ.15ರಿಂದ 18ರವರೆಗೆ ದ್ಸಿಕ್ರ್ ಸ್ವಲಾತ್ ವಾರ್ಷಿಕ

Update: 2018-02-13 05:44 GMT

ಅಜ್ಜಿನಡ್ಕ, ಫೆ.13: ಇಲ್ಲಿನ ಬದ್ರಿಯಾ ಜುಮಾ ಮಸೀದಿಯ ಅಶ್ರಯದಲ್ಲಿ ನಡೆಯುತ್ತಿರುವ ದ್ಸಿಕ್ರ್ ಸ್ವಲಾತ್ ನ 12ನೇ ವಾರ್ಷಿಕ ಹಾಗೂ ನಾಲ್ಕು ದಿನಗಳ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವು ಫೆ.15ರಿಂದ 18ರವರಗೆ ಜರುಗಲಿದೆ.

ಫೆ.15ರಂದು ಸಯ್ಯದ್ ಶಹೀರ್ ತಂಙಳ್ ಪೊಸೋಟ್ ಕಾರ್ಯಕ್ರಮ ಉದ್ಘಾಟಿಸುವರು. ಹುಸೈನ್ ಸಅದಿ ಕೆ.ಸಿ.ರೋಡ್ ಉಪನ್ಯಾಸ ನೀಡುವರು. ಫೆ.16ರಂದು ಹಾಶಿರ್ ಹಾಮಿದ್ ಮತ್ತು 17ರಂದು ಇಬ್ರಾಹೀಂ ಫೈಝಿ ಉಪನ್ಯಾಸ ನೀಡುವರು. 18ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಸಯ್ಯದ್ ಶಫೀಕ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ನೇತೃತ್ವ ವಹಿಸುವರು. ಅಬೂಬಕರ್ ಸಿದ್ದೀಕ್ ಜಲಾಲಿ ಕೂರ್ನಡ್ಕ ಮುಖ್ಯ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಆಹಾರ ಸಚಿವ ಯು.ಟಿ.ಖಾದರ್ ಭಾಗವಹಿಸುವರು ಎಂದು ಬದ್ರಿಯಾ ಜುಮಾ ಮಸೀದಿಯ ಕಾರ್ಯದರ್ಶಿ ಅಹ್ಮದ್ ಅಜ್ಜಿನಡ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News