ಬಡವರು ಸ್ವಚ್ಛವಾಗಿರಬೇಕು ಎಂದ ಗೋವಾ ಸಿಎಂ ಪಾರಿಕ್ಕರ್
Update: 2018-02-13 20:14 IST
ಪಣಜಿ, ಫೆ.13: ಬಡವರು ಸ್ವಚ್ಛವಾಗಿರಬೇಕು. ಇದಕ್ಕೆ ಹೆಚ್ಚೇನೂ ಖರ್ಚಾಗಲಾರದು ಎಂದು ಗೋವಾ ಸಿಎಂ ಮನೋಹರ್ ಪಾರಿಕ್ಕರ್ ಹೇಳಿದ್ದಾರೆ. ರಸ್ತೆ ಬದಿಯ ವ್ಯಾಪಾರಿಗಳ ಬಗ್ಗೆ ಉಲ್ಲೇಖಿಸಿ ನೈರ್ಮಲ್ಯದ ಕೊರತೆಯಿದ್ದು, ಸ್ವಚ್ಛವಾಗಿರಲು ಕಡಿಮೆ ಖರ್ಚು ತಗಲುತ್ತದೆ ಎಂದಿದ್ದಾರೆ.
“ಶುದ್ಧ ಹಾಗು ಸ್ವಚ್ಛತೆಯಿಂದ ಇರಬೇಕು. ಬಡವರು ಕೂಡ ಸ್ವಚ್ಛವಾಗಿರಬೇಕು. ಅದಕ್ಕೆ ಹೆಚ್ಚು ಖರ್ಚಾಗುವುದಿಲ್ಲ ಎಂದು ನನಗನಿಸುತ್ತದೆ” ಎಂದು ಪಾರಿಕ್ಕರ್ ಹೇಳಿದ್ದಾರೆ.
ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.