×
Ad

ರೈಲ್ವೇಯಲ್ಲಿ 2,651 ಹುದ್ದೆಗಳಿಗೆ ಅರ್ಜಿ ಆಹ್ವಾನ

Update: 2018-02-13 20:28 IST

ಹೊಸದಿಲ್ಲಿ, ಫೆ.13: ರೈಲ್ವೇ ಇಲಾಖೆಯಲ್ಲಿ ಖಾಲಿಯಿರುವ 2651 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪೂರ್ವಕೇಂದ್ರ ರೈಲ್ವೇ ಮತ್ತು ಪಶ್ಚಿಮ ರೈಲ್ವೇಯು ರಾಜ್ಯಾದ್ಯಂತ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ರೈಲ್ವೇ ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡಬಹುದು ಅಥವಾ ಕೆಳಗೆ ನೀಡಲಾಗಿರುವ ವರದಿಯಿಂದ ಮಾಹಿತಿಯನ್ನು ಪಡೆಯಬಹುದಾಗಿದೆ. ರೈಲ್ವೇ ಸಚಿವಾಲಯವು ತನ್ನ ಪ್ರಕಟನೆಯಲ್ಲಿ ಅಪ್ರೆಂಟಿಸ್, ಕಿರಿಯ ಇಂಜಿನಿಯರ್, ಟ್ರೇಡ್ಸ್‌ಮ್ಯಾನ್ ಹಾಗೂ ಇತರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅಪ್ರೆಂಟಿಸ್ ಆಗಿ ಪೂರ್ವಕೇಂದ್ರ ರೈಲ್ವೇಯಲ್ಲಿ ಉದ್ಯೋಗಾವಕಾಶ

ಪೂರ್ವಕೇಂದ್ರ ರೈಲ್ವೇಯು 1898 ಅಪ್ರೆಂಟಿಸ್ ಹುದ್ದೆಗಳಿಗಾಗಿ ಅರ್ಜಿಯನ್ನು ಅಹ್ವಾನಿಸಿದೆ. ಇದಕ್ಕೆ ಸಂಬಂಧಪಟ್ಟಂತೆ ಅರ್ಜಿ ಸ್ವೀಕಾರ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದೆ. ಅರ್ಜಿದಾರರು ಹತ್ತನೇ ತರಗತಿ ಅಥವಾ ತತ್ಸಮಾನ ಕಲಿಕೆಯಲ್ಲಿ ಕನಿಷ್ಟ ಶೇ. 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಸಂಬಂಧಿತ ವಿಭಾಗದಲ್ಲಿ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು. ಹುದ್ದೆಗಳ ಸಂಖ್ಯೆ: 1898

ದನಪುರ ವಿಭಾಗ: 626 ಹುದ್ದೆಗಳು

ದನ್ಬಾದ್ ವಿಭಾಗ: 142 ಹುದ್ದೆಗಳು

ಮೊಘಲ್‌ಸರೈ: 844 ಹುದ್ದೆಗಳು

ಸಮಸ್ತಿಪುರ: 70 ಹುದ್ದೆಗಳು

ಪ್ಲಾಂಟ್ ಡಿಪೊ/ಮೊಘಲ್‌ಸರೈ: 116 ಹುದ್ದೆಗಳು

ಮೆಕ್ಯಾನಿಕಲ್ ವರ್ಕ್‌ಶಾಪ್/ಸಮಸ್ತಿಪುರ: 100 ಹುದ್ದೆಗಳು

ಪ್ರಮುಖ ದಿನಾಂಕಗಳು;

ಆನ್‌ಲೈನ್ ಅರ್ಜಿ ಸ್ವೀಕಾರ: ಜನವರಿ 30, 2018

ಅರ್ಜಿ ಹಾಕಲು ಕೊನೆಯ ದಿನಾಂಕ: ಫೆಬ್ರವರಿ 28, 2018

ವಯಸ್ಸು ಮಿತಿ: 15ರಿಂದ 24 ವರ್ಷ

ಪೂರ್ವ ಕೇಂದ್ರ ರೈಲ್ವೇ ಹುದ್ದೆಗೆ ಅರ್ಜಿ ಹಾಕುವ ವಿಧಾನ;

www.rrcecr.gov.in/

ಅರ್ಹ ಅಭ್ಯರ್ಥಿಗಳು ಫೆಬ್ರವರಿ 28ರ ಒಳಗಾಗಿ ರೈಲ್ವೇಯ ಅಧಿಕೃತ ಜಾಲತಾಣ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಭರ್ತಿ ಮಾಡುವ ಸಲುವಾಗಿ ಅಭ್ಯರ್ಥಿಗಳು 100 ರೂ. ಶುಲ್ಕವನ್ನು ಪಾವತಿಸಬೇಕು. ಶುಲ್ಕವನ್ನು ಪಾವತಿಸಿದ ನಂತರ ಅಭ್ಯರ್ಥಿಗಳು ರೈಲ್ವೇ ಜಾಲತಾಣಕ್ಕೆ ಮರುಪ್ರವೇಶ ಪಡೆಯುತ್ತಾರೆ ಮತ್ತು ಅರ್ಜಿಯನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ. ಆನಂತರ ಭರ್ತಿಯಾದ ಅರ್ಜಿಯ ಪ್ರತಿಯನ್ನು ಡೌನ್‌ಲೋಡ್ ಮಾಡಬೇಕು. ಪಶ್ಚಿಮ ರೈಲ್ವೇಯಲ್ಲಿ ಕಿರಿಯ ಇಂಜಿನಿಯರ್, ಟ್ರೇಡ್ಸ್‌ಮ್ಯಾನ್ ಮತ್ತು ಇತರ ಹುದ್ದೆಗಳು:

ಮೇಲಿನ ಹುದ್ದೆಗಳಿಗೆ ಆಸಕ್ತರು ಫೆಬ್ರವರಿ 14ರ ಸಂಜೆ 6 ಗಂಟೆಯ ಒಳಗಾಗಿ ಅರ್ಜಿಗಳನ್ನು ಹಾಕಬಹುದಾಗಿದೆ. ರೈಲ್ವೇ ಆಯ್ಕೆ ನಿಯಮದಲ್ಲಿ ತಿಳಿಸಲಾಗಿರುವ ಶೈಕ್ಷಣಿಕ, ತಾಂತ್ರಿಕ ಮತ್ತು ಅನುಭವದ ಅರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು. ಹುದ್ದೆಗಳ ಸಂಖ್ಯೆ: 753

ಕಿರಿಯ ಇಂಜಿನಿಯರ್

ಹಿರಿಯ ಸಿಗ್ನಲ್ ಇಂಜಿನಿಉರ್

ಸಹಾಯಕ

ಪೈಂಟರ್

ಟರ್ನರ್

ಫಿಟ್ಟರ್

ಮರದ ಕೆಲಸಗಾರರು

ವೆಲ್ಡರ್

ಸ್ಟೇಶನ್ ಮಾಸ್ಟರ್

ಪೊಯಿಂಟ್ಸ್‌ಮ್ಯಾನ್

ಖಲಸಿ

ಕ್ಲರ್ಕ್/ಒಸಿಎಂಜಿ

ಕ್ಲರ್ಕ್/ಡಬ್ಲೂಎಸ್‌ಎಂಬಿ

ಸ್ಟೆನೊ/ಪಿಎ/ಸಿಎ

ಫಾರ್ಮಸಿಸ್ಟ್

ಗುಮಾಸ್ತ

ಎಂಎಲ್‌ಡಿ

ಪ್ರಮುಖ ದಿನಗಳು;

ಅರ್ಜಿ ಹಾಕಲು ಕೊನೆಯ ದಿನಾಂಕ: ಫೆಬ್ರವರಿ 14, 2018

ಅರ್ಜಿ ಹಾಕುವ ವಿಧಾನ;

ಅರ್ಜಿದಾರರು ತಮ್ಮ ಅರ್ಜಿಯನ್ನು ಮುಂಬೈ ಕೇಂದ್ರದ ಡಿಆರ್‌ಎಂ ಕಚೇರಿಯ ವೆಲ್ಪೇರ್ ವಿಭಾಗಕ್ಕೆ ಅಂಚೆಯ ಮೂಲಕ ಕಳುಹಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News