ಬರಕಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ನಾಲ್ವರು ವಿದ್ಯಾರ್ಥಿಗಳಿಗೆ ಪದಕ

Update: 2018-02-20 05:17 GMT

ಮಂಗಳೂರು, ಫೆ.15: ಬರಕಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ನಾಲ್ವರು ವಿದ್ಯಾರ್ಥಿಗಳು ಡಬ್ಲ್ಯೂಎಫ್‌ಎಸ್‌ಕೆಒ ಓಪನ್ ಏಷ್ಯನ್/ಇಂಟರ್‌ನ್ಯಾಶನಲ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಕರಾಟೆ ಚಾಂಪಿಯನ್‌ಶಿಪ್ ಮುಂಬೈ ಉಪನಗರ ಮುಲುಂಡ್‌ನ ಪ್ರಿಯದರ್ಶಿನಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಫೆ.10 ಹಾಗೂ 11ರಂದು ನಡೆದಿತ್ತು.

7ನೆ ತರಗತಿಯ ಮುಹಮ್ಮದ್ ಅಯಾನ್ ಕುಮಿಟೆಯಲ್ಲಿ ಚಿನ್ನ ಹಾಗೂ ಕಟಾದಲ್ಲಿ ಕಂಚಿನ ಪದಕ, 5ನೆ ತರಗತಿಯ ಮುಹಮ್ಮದ್ ಶಯಾನ್ ಕಟಾದಲ್ಲಿ ಚಿನ್ನದ ಪದಕ, 6ನೆ ತರಗತಿಯ ಮುಹಮ್ಮದ್ ಅಮಾನ್ ಕುಮಿಟೆ ಹಾಗೂ ಕಟಾದಲ್ಲಿ ಕಂಚು ಜಯಿಸಿದ್ದಾರೆ. 6ನೆ ತರಗತಿಯ ಮುಹಮ್ಮದ್ ಮಾಹಿರ್ ಕಟಾದಲ್ಲಿ ಕಂಚು ಜಯಿಸಿದ್ದಾರೆ. ಅವರು ನದೀಮ್ ಅವರ ಮಾರ್ಗದರ್ಶನದಲ್ಲಿ ಪದಕಗಳನ್ನು ಗೆದ್ದುಕೊಂಡಿದ್ದಾರೆ. 

ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದ್ದ  ಬರಕಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ಎಲ್ಲ ವಿದ್ಯಾರ್ಥಿಗಳು ಪದಕ ಗೆದ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News