ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ. ಜಿಲ್ಲಾಧ್ಯಕ್ಷರಾಗಿ ಇಮ್ರಾನ್ ಪಿ.ಜೆ ಆಯ್ಕೆ

Update: 2018-02-15 12:58 GMT

ಪುತ್ತೂರು, ಫೆ. 15: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ. ಜಿಲ್ಲೆಯ ಪ್ರತಿನಿಧಿ ಸಭೆಯು ಪುತ್ತೂರಿನ ಫ್ರೀಡಂ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷ ಮುಹಮ್ಮದ್ ಅಥಾವುಲ್ಲ ಧ್ವಜಾರೋಹಣದ ಮೂಲಕ ಚಾಲನೆ ನೀಡಿದರು.

ರಾಜ್ಯ ಸಮಿತಿ ಸದಸ್ಯ ಇರ್ಶಾದ್ ಕಾವು ಉದ್ಘಾಟನಾ ಭಾಷಣ ಮಾಡಿ, ಸಮಾಜದಲ್ಲಿ ವಿದ್ಯಾರ್ಥಿಗಳ ಸಾಮಾಜಿಕ ಬದಲಾವಣೆಗಾಗಿ ಹಾಗೂ ಕ್ಯಾಂಪಸ್ ಸಬಲೀಕರಣಕ್ಕಾಗಿ ತಳಮಟ್ಟದಲ್ಲಿ ವಿದ್ಯಾರ್ಥಿಗಳನ್ನು ಸಂಘಟಿಸಿ, ದೇಶದಲ್ಲಿ ವಿದ್ಯಾರ್ಥಿ ವಿರೋಧಿ ನೀತಿಯ ವಿರುದ್ಧ ನ್ಯಾಯಕ್ಕಾಗಿ ಸದಾ ಧ್ವನಿಯೆತ್ತುತ್ತಾ ಬಂದಿದೆ ಎಂದು ಹೇಳಿದರು.

ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಇಮ್ರಾನ್ ಪಿ.ಜೆ. ವಾಚಿಸಿದರು. ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಮಹಮ್ಮದ್ ತಪ್ಸೀರ್ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಜಿಲ್ಲೆಯ ನೂತನ ಅಧ್ಯಕ್ಷರಾಗಿ ಇಮ್ರಾನ್ ಪಿ.ಜೆ., ಕಾರ್ಯದರ್ಶಿಯಾಗಿ ಸಾದಿಕ್ ಪುತ್ತೂರು, ಉಪಾಧ್ಯಕ್ಷರಾಗಿ ಫಹದ್ ಅನ್ವರ್ ಹಾಗೂ ಮುರ್ಶಿದಾ, ಜೊತೆ ಕಾರ್ಯದರ್ಶಿಗಳಾಗಿ ನಿಝಾಮ್ ಮತ್ತು ಮುಫೀದಾ, ಕೋಶಾಧಿಕಾರಿಯಾಗಿ ಇಫಾಝ್ ಹಾಗೂ ಸಮಿತಿ ಸದಸ್ಯರಾಗಿ ತಾಜುದ್ದೀನ್ ಮತ್ತು ಸುಹೈನಾ ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವಂತಹ ವಿದ್ಯಾರ್ಥಿಗಳ ಸಾಂಸ್ಥಿಕ ಹತ್ಯೆ ಹಾಗೂ ದಬ್ಬಾಳಿಕೆಯ ವಿರುದ್ಧ ಫೆ. 24ರಂದು ಪುತ್ತೂರಿನಲ್ಲಿ ವಿದ್ಯಾರ್ಥಿ ಹೋರಾಟ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದು ತೀರ್ಮಾನಿಸಲಾಯಿತು.

ಸಭೆಯನ್ನು ಸಾದಿಕ್ ಪುತ್ತೂರು ಸ್ವಾಗತಿಸಿ, ಅಥಾವುಲ್ಲಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News