6ನೇ ಏಕದಿನ: ಟೀಮ್ ಇಂಡಿಯಾದ ಗೆಲುವಿಗೆ 205 ರನ್ ಸವಾಲು

Update: 2018-02-16 14:50 GMT

ಸೆಂಚೂರಿಯನ್, ಫೆ.16: ಭಾರತದ ಸಂಘಟಿತ ದಾಳಿಗೆ ಸಿಲುಕಿದ ದಕ್ಷಿಣ ಆಫ್ರಿಕ ತಂಡ ಶುಕ್ರವಾರ ಆರನೇ ಹಾಗೂ ಅಂತಿಮ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ 46.5 ಓವರ್‌ಗಳಲ್ಲಿ 204 ರನ್‌ಗಳಿಗೆ ಆಲೌಟಾಗಿದೆ.

 ಸೂಪರ್‌ಸ್ಪೋಟ್ಸ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕ ತಂಡ ವೇಗಿ ಶಾರ್ದೂಲ್ ಠಾಕೂರ್ ದಾಳಿಗೆ ತತ್ತರಿಸಿ ಕಡಿಮೆ ಮೊತ್ತಕ್ಕೆ ಆಲೌಟಾಗಿದೆ.

ಕೈಲ್ ರೊಂಡೊ (54) ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದರು.

ಹಂಗಾಮಿ ನಾಯಕ ಏಡೆನ್ ಮರ್ಕರಮ್(24), ಹಾಶಿಮ್ ಅಮ್ಲ(10), ಎಬಿಡಿವಿಲಿಯರ್ಸ್‌(30), ಕ್ಲಾಸೆನ್(22), ಫೆಹ್ಲುಕ್ವಾಯೊ (34), ಮೊರ್ನೆ ಮೊರ್ಕೆಲ್(20) ಎರಡಂಕೆಯ ಸ್ಕೋರ್ ಜಮೆ ಮಾಡಿದರು.

ಭಾರತದ ಠಾಕೂರ್(52ಕ್ಕೆ4), ಬುಮ್ರಾ ಮತ್ತು ಚಹಾಲ್ ತಲಾ 2, ಪಾಂಡ್ಯ ಮತ್ತು ಕುಲ್‌ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News