ಬೆಂಕಿಯೇಕೆ ಬಿಸಿಯಾಗಿರುತ್ತದೆ....?

Update: 2018-02-16 16:37 GMT

 ನಿಜಕ್ಕೂ ಇದೊಂದು ಕುತೂಹಲಕರ ಪ್ರಶ್ನೆ. ರಾಸಾಯನಿಕ ಕ್ರಿಯೆಗಳು ಬಹಿರುಷ್ಣಕ (ಉಷ್ಣತೆ ಬಿಡುಗಡೆಗೊಳಿಸುವ) ಅಥವಾ ಅಂತಃರುಷ್ಣಕ(ಉಷ್ಣತೆ ಹೀರಿಕೊಳ್ಳುವ) ಗಳಾಗಿರುತ್ತವೆ. ಉತ್ಕರ್ಷಣ ಕ್ರಿಯೆಗಳು ಬಹಿರುಷ್ಣಕ ಮತ್ತು ಅಪಕರ್ಷಣ ಕ್ರಿಯೆಗಳು ಅಂತಃರುಷ್ಣಕವಾಗಿರುತ್ತವೆ. ದಹನವು ಉತ್ಕರ್ಷಣ ಕ್ರಿಯೆಯಾಗಿರುವುದರಿಂದ ಅದು ಬಹಿರುಷ್ಣಕವಾಗಿದೆ.

ಎಲ್ಲ ದ್ರವ, ಘನ ಮತ್ತು ಅನಿಲ ರೂಪದ ಇಂಧನಗಳು ಮೂರು ದಹ್ಯ ಘಟಕಗಳಾದ ಇಂಗಾಲ,ಜಲಜನಕ ಮತ್ತು ಗಂಧಕ ಇವುಗಳ ಪೈಕಿ ಯಾವುದಾದರೊಂದನ್ನು ಒಳಗೊಂಡಿರುತ್ತವೆ. ಇಂಧನವೊಂದನ್ನು ದಹಿಸಿದಾಗ ಉತ್ಪತ್ತಿಯಾಗುವ ಉಷ್ಣತೆಯು ದಹನಕ್ರಿಯೆಯ ಉತ್ಪನ್ನಗಳನ್ನು ಬಿಸಿಯಾಗಿಸುತ್ತದೆ. ಇಂಗಾಲದ ಡೈಆಕ್ಸೈಡ್, ನೀರಿನ ಬಾಷ್ಪ ಮತ್ತು ಗಂಧಕದ ಡೈಆಕ್ಸೈಡ್ ದಹನಕ್ರಿಯೆಯ ಉತ್ಪನ್ನಗಳಾಗಿವೆ. ಇವುಗಳೊಂದಿಗೆ ದಹನಕ್ರಿಯೆಗೆ ಪೂರೈಕೆಯಾಗಿದ್ದ ವಾಯುವಿನಲ್ಲಿಯ ಬಳಕೆಯಾಗಿರದ ಆಮ್ಲಜನಕ ಮತ್ತು ವಾಯುವಿನ ಪ್ರಮುಖ ಘಟಕವಾಗಿರುವ ಅಷ್ಟೂ ಸಾರಜನಕ ಕೂಡ ಬಿಸಿಯಾಗುತ್ತವೆ. ಇದೇ ಕಾರಣದಿಂದ ಬೆಂಕಿಯು ಬಿಸಿಯಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News