ಯೆನೆಪೊಯ ನರ್ಸಿಂಗ್ ಕಾಲೇಜಿನಲ್ಲಿ ಉಚಿತ ಅರೋಗ್ಯ ತಪಾಸಣೆ ಶಿಬಿರ

Update: 2018-02-17 08:07 GMT

ಮಂಗಳೂರು, ಫೆ. 17: ಯೆನೆಪೊಯ ನರ್ಸಿಂಗ್ ಕಾಲೇಜು, ವೈದ್ಯಕೀಯ ಶಸ್ತ್ರಚಿಕಿತ್ಸೆ ಶುಶ್ರೂಷಾ ವಿಭಾಗ ಹಾಗು ರಾಷ್ಟ್ರೀಯ ಸೇವಾ ಯೋಜನಾ ಇವರ ಜಂಟಿ ಆಶ್ರಯದಲ್ಲಿ ಉಚಿತ ಅರೋಗ್ಯ ತಪಾಸಣೆ ಒಲವಿನಹಳ್ಳಿ ಪುನರ್ವಸತಿ ಕೇಂದ್ರದಲ್ಲಿ ನಡೆಯಿತು.

ಈ ಸಂದರ್ಭ ಪ್ರಾಂಶುಪಾಲರಾದ ಡಾ. ಲೀನಾ ಕೆ ಸಿ , ವೈದ್ಯಕೀಯ ವಿಭಾಗದ ಮುಖ್ಯಸ್ಥೆ ಡಾ. ಪ್ರಭಾ ಅಧಿಕಾರಿ, ಒಲವಿನ ಹಳ್ಳಿ ಪುನರ್ವಸತಿ ಕೇಂದ್ರ ನಿರ್ವಾಹಕರಾದ ಭಗಿನಿ ಲೂಸಿ ರೊಡ್ರಿಗಸ್, ಪ್ರೊ. ಶಶಿಕುಮಾರ್ ಜವಾಡಗಿ ಹಾಗು ಇತರರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಪುನರ್ವಸತಿ ಕೇಂದ್ರದ ಹಿರಿಯರು ಹಾಗು ಇತರರು ಪಾಲ್ಗೊಂಡಿದ್ದರು. ಆರೋಗ್ಯ ತಪಾಸಣೆಯ ನಂತರ ಹಿರಿಯರಿಗೆ ಉಚಿತ ಔಷಧಿ ಹಾಗು ಹಣ್ಣು ಹಂಪಲು ವಿತರಿಸಲಾಯಿತು. ಜೊಬಿನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News