ಪಾಪ್ಯುಲರ್ ಫ್ರಂಟ್ ಮಂಗಳೂರು ಜಿಲ್ಲಾ ಸಮಿತಿ ವತಿಯಿಂದ ಪಿಎಫ್ಐ ಡೇ

Update: 2018-02-17 08:39 GMT

ಮಂಗಳೂರು, ಫೆ. 17: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ 11ನೇ ವರ್ಷಾಚರಣೆಯ ಅಂಗವಾಗಿ ಪಾಪ್ಯುಲರ್ ಫ್ರಂಟ್ ಡೇ ಪ್ರಯುಕ್ತ ಮಂಗಳೂರಿನ ಸ್ಟೇಟ್ ಬ್ಯಾಂಕ್ ನೆಲ್ಲಿಕಾಯಿ ರಸ್ತೆಯಲ್ಲಿ ಪಾಪ್ಯುಲರ್ ಫ್ರಂಟ್ ಕಚೇರಿ ಎದುರು ದ್ವಜಾರೋಹಣ ಮತ್ತು ಸಂದೇಶ ಕಾರ್ಯಕ್ರಮ ಶನಿವಾರ ಬೆಳಗ್ಗೆ ನಡೆಯಿತು.

ಸಂದೇಶ ಭಾಷಣ ಮಾಡಿದ ಪಾಪ್ಯುಲರ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಝಾಕ್ ಕೆಮ್ಮಾರ, ಸ್ವತಂತ್ರ ಭಾರತದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ, ನ್ಯಾಯ, ರಕ್ಷಣೆ, ಸಮಾನತೆ ಖಾತರಿ ಪಡಿಸುವ ಸಂವಿಧಾನ ಅಸ್ಥಿತ್ವದಲ್ಲಿ ಇದ್ದರೂ ದೇಶದ ಅರ್ಧದಷ್ಟು ಜನರು ಬಡತನದಿಂದ, ಭೀತಿಯಿಂದ ಜೀವಿಸುತ್ತಿದ್ದಾರೆ. ದಿನನಿತ್ಯ ಅಲ್ಪಸಂಖ್ಯಾತ ಸಮುದಾಯ ತನ್ನ ಅಸ್ಥಿತವನ್ನೇ ಪ್ರಶ್ನಿಸಲ್ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಮನಿಸಲ್ಪಟ್ಟು ಮೂಲೆಗೆಸೆಯಲ್ಪಟ್ಟ ಸಮುದಾಯವನ್ನು ಮುಖ್ಯವಾಹಿಣಿಗೆ ತರುವ ಪ್ರಯತ್ನ ಕಳೆದ ಹಲವಾರು ವರ್ಷಗಳಿಂದ ಪಾಪ್ಯುಲರ್ ಫ್ರಂಟ್ ನಡೆಸುತ್ತಾ ಬಂದಿದೆ. ಹಕ್ಕುಗಳು ಮತ್ತು ನ್ಯಾಯವನ್ನು ಕೇಳಿದ ಹೋರಾಟಗಾರರನ್ನು ಗುರಿ ಮಾಡುವ ಮೂಲಕ ಹೋರಾಟವನ್ನು ದಮನಿಸುವ ಪ್ರಯತ್ನ ನಡೆಸಲಾಗುತ್ತಿದೆ. ಪಾಪ್ಯುಲರ್ ಫ್ರಂಟ್ ನೋವುಂಡವರ ಧ್ವನಿಯಾಗಿದೆ. ಇಂದಿನ ಫ್ಯಾಶಿಷ್ಟ್ ಸರ್ಕಾರವನ್ನು ಎದುರಿಸಲು ಇಲ್ಲಿನ ಹಿಂದುಳಿದ, ಅಲ್ಪಸಂಖ್ಯಾತ, ದಲಿತ ವರ್ಗವು ಪಾಪುಲರ್ ಫ್ರಂಟ್ ನೊಂದಿಗೆ ಕೈ ಜೋಡಿಸಬೇಕಾಗಿದೆ ಎಂದು ಹೇಳಿದರು.

ಮಂಗಳೂರು ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ ಧ್ವಜರೋಹನ ನೆರವೇರಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಂಗಳೂರಿನ ಮಾಜಿ ಮೇಯರ್ ಕೆ. ಅಶ್ರಫ್, ಯುನಿವೆಫ್ ರಾಜ್ಯಾಧ್ಯಕ್ಷ ರಫೀವುದ್ದೀನ್ ಕುದ್ರೋಳಿ, ಎಸ್ಡಿಟಿಯು ರಾಜ್ಯಾಧ್ಯಕ್ಷ ಜಲೀಲ್ ಕ್ರಷ್ಣಾಪುರ ಮಾತನಾಡಿದರು.

ಪಾಪ್ಯುಲರ್ ಫ್ರಂಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಾದರ್ ಕುಳಾಯಿ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಫರ್ ಸಾದಿಕ್ ಫೈಝಿ, ಜಿಲ್ಲಾಧ್ಯಕ್ಷ ರಫೀಕ್ ದಾರಿಮಿ, ಅಲ್ ಹಕ್ ಫೌಂಡೇಷನ್ ನ ಲತೀಫ್ ಕುದ್ರೋಳಿ ಈ ಸಂದರ್ಭ ಉಪಸ್ಥಿತರಿದ್ದರು. ಪಿಎಫ್ಐ ಜಿಲ್ಲಾ ಸಮಿತಿ ಸದಸ್ಯ ಹಾರಿಸ್ ಮಲಾರ್ ಕಾರ್ಯಕ್ರಮ ನಿರೂಪಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News