ಮೂಡುಬಿದಿರೆ: ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಸಾಧನೆ

Update: 2018-02-17 09:14 GMT

ಮೂಡುಬಿದಿರೆ, ಫೆ. 17: ಅಲ್ ಫುರ್ಖಾನ್ ವಿದ್ಯಾಸಂಸ್ಥೆಯ ಕರಾಟೆ ಪಟುಗಳು ಮುಂಬೈಯಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಪದಕ ಮತ್ತು ಪ್ರಶಸ್ತಿ ಪತ್ರ ಪಡೆದುಕೊಂಡಿದ್ದಾರೆ.

23ನೇ WFSKO ಮುಕ್ತ ಏಷಿಯನ್ ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್‌ಶಿಪ್ ಆಯೋಜಿಸಿರುವ ವಲ್ಡ್ ಫನಕೋಶಿ ಶೊಟೊಕನ್ ಕರಾಟೆ ಸಂಸ್ಥೆಯ ಅಧೀನದಲ್ಲಿ ಕರಾಟೆ ಸ್ಪರ್ಧೆ ನಡೆಯಿತು. 

ಸ್ವ-ರಕ್ಷಣಾ ಕಲೆಯಲ್ಲಿ ನಿಸ್ಸೀಮರಾದ ಸಂಸ್ಥೆಯ ಮೂರು ವಿದ್ಯಾಥಿಗರ್ಳು ಆಯ್ಕೆಗೊಂಡಿದ್ದರು. ಶಮ್ಮಾಝ್ 8ನೆ, ಶೀಷ್ 7ನೆ, ಸರೋಶ್ 7ನೆ  ವೈಯಕ್ತಿಕ ಕತಾ ವಿಭಾಗದಲ್ಲಿ  ಪ್ರಥಮ ಸ್ಥಾನಿಯಾದರೆ, ಸರೋಶ್ ತನ್ನ ಕಲಾ ಸಾಮರ್ಥ್ಯ ಮೆರೆದು ವೈಯಕ್ತಿಕ ಕತಾದಲ್ಲಿ ಮೊದಲ ಸ್ಥಾನಿಯಾಗಿ ಸಂಸ್ಥೆಗೆ ಕೀರ್ತಿ ತಂದಿರುವನು. ಶೀಷ್  2 ವಿಭಾಗದಲ್ಲಿ ತನ್ನ ಕರಾಟೆ ಸಾಮರ್ಥ್ಯವನ್ನು ಮೆರೆದು ಕತಾ ಮತ್ತು ಕುಮುಟಿ ವಿಭಾಗದಲ್ಲಿ 3ನೇ ಸ್ಥಾನವನ್ನು ಪಡೆದು ವಿಜಯಿಯಾಗಿರುತ್ತಾನೆ.

ವಿದ್ಯಾರ್ಥಿಗಳ ಈ ಸಾಧನೆಯಿಂದ ಪ್ರೇರೇಪಿತರಾಗಿ ಸಂಸ್ಥೆಯ ಚೇಯರ್ ಮ್ಯಾನ್, ಪ್ರಾಚಾರ್ಯೆ, ನಿರ್ದೇಶಕಿ, ಆಡಳಿತಾಧಿಕಾರಿಗಳು, ಶಿಕ್ಷಕರು,  ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News