ಚುನಾವಣೆಯ ಸಂದರ್ಭ ನೀರವ್ ಮೋದಿ ಬಿಜೆಪಿಗೆ ಸಹಾಯ ಮಾಡಿದ್ದ: ಶಿವಸೇನೆ ಗಂಭೀರ ಆರೋಪ

Update: 2018-02-17 14:07 GMT

ಮುಂಬೈ, ಫೆ.17: ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ 11,400 ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ನೀರವ್ ಮೋದಿ ಜೊತೆ ಬಿಜೆಪಿಗೆ ಸಂಪರ್ಕವಿದೆ ಎಂದು ಶಿವಸೇನೆ ಆರೋಪಿಸಿದೆ.

ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ದಾವೋಸ್ ಸಮ್ಮೇಳನದಲ್ಲಿ ನೀರವ್ ಮೋದಿ ಕಾಣಿಸಿಕೊಂಡಿದ್ದ ಎಂದು ಶಿವಸೇನೆ ಮುಖವಾಣಿ ಹೇಳಿದೆ.

“ನೀರವ್ ಮೋದಿ ಬಿಜೆಪಿಯ ಪಾಲುದಾರನಾಗಿದ್ದಾನೆ. ಚುನಾವಣೆಯ ಸಂದರ್ಭ ಆತ ಬಿಜೆಪಿಗೆ ಸಹಾಯ ಮಾಡಿದ್ದಾನೆ. 100 ರೂ.ನಿಂದ 500 ರೂ. ವರೆಗಿನ ಸಾಲ ಮರುಪಾವತಿ ಮಾಡಲಾಗದೆ ಒಂದೆಡೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದರೆ ಇನ್ನೊಂದೆಡೆ ಕೋಟ್ಯಾಂತರ ರೂ.ಗಳನ್ನು ವಂಚಿಸಿ ಕೆಲವರು ತಲೆ ಮರೆಸಿಕೊಳ್ಳುತ್ತಿದ್ದಾರೆ” ಎಂದು ಸಾಮ್ನಾ ಹೇಳಿದೆ.

ಮುಂಬೈಯ ಛಗನಗ ಬುಜ್ ಬಲ್ ಹಾಗು ಲಾಲು ಪ್ರಸಾದ್ ಯಾದವ್ ಜೈಲಿನಲ್ಲಿದ್ದಾರೆ. ಆದರೆ ಮದ್ಯದ ದೊರೆ ವಿಜಯ್ ಮಲ್ಯ ಮತ್ತು ನೀರವ್ ಮೋದಿ ಕೋಟಿ ರೂ.ಗಳನ್ನು ವಂಚಿಸಿ ಪರಾರಿಯಾಗಿದ್ದಾರೆ ಎಂದು ಅಂಕಣದಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News