×
Ad

ಮರಾಠಿ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ : ಪ್ರಸ್ತಾವನೆ ಸಲ್ಲಿಕೆ

Update: 2018-02-17 20:32 IST
ದೇವೇಂದ್ರ ಫಡ್ನವೀಸ್

ವಡೋದರ, ಫೆ.17: ಮರಾಠಿಗೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯನ್ನು ಕೇಂದ್ರ ಸರಕಾರದ ಮುಂದಿರಿಸಲಾಗಿದ್ದು ಇದನ್ನು ಸರಕಾರ ಪರಿಶೀಲಿಸುತ್ತಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.

   ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾಷಾ ತಜ್ಞರನ್ನೊಳಗೊಂಡಿರುವ ಸಮಿತಿಯ ಎದುರು ಪ್ರಸ್ತಾವನೆಯನ್ನು ಇರಿಸಲಾಗಿದ್ದು ಸಮಿತಿ ಇದಕ್ಕೆ ಅನುಮೋದನೆ ನೀಡಿದೆ. ಈಗ ಈ ಪ್ರಸ್ತಾವನೆಯನ್ನು ಕೇಂದ್ರದ ಸಂಸ್ಕೃತಿ ಸಚಿವಾಲಯ ಪರಿಶೀಲಿಸುತ್ತಿದೆ ಎಂದು ಫಡ್ನವೀಸ್ ಹೇಳಿದರು.

  ಈಗ ವಡೋದರ ಎಂಬ ಹೆಸರಿನಲ್ಲಿ ಕರೆಯಲಾಗುವ , ಈ ಹಿಂದಿನ ಬರೋಡ ರಾಜಮನೆತನದ ದಿವಂಗತ ಸಯ್ಯಜಿರಾವ್ ಗಾಯಕ್ವಾಡ್ ದೇಶದ ಸ್ವಾತಂತ್ರ ಸಂಗ್ರಾಮದಲ್ಲಿ ವಹಿಸಿದ್ದ ಪಾತ್ರವನ್ನು ಫಡ್ನವೀಸ್ ಸ್ಮರಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News