​ಇನ್ನು ಮುಂದೆ ರೈಲು ಬೋಗಿ, ವಿಶೇಷ ರೈಲುಗಳನ್ನೇ ಬುಕ್ ಮಾಡಿ!

Update: 2018-02-17 16:13 GMT

 ಹೊಸದಿಲ್ಲಿ, ಫೆ. 17: ವಿವಾಹ ಭೋಜನಕೂಟ, ಧಾರ್ಮಿಕ ಪ್ರವಾಸಕ್ಕೆ ರೈಲು ಬೋಗಿಯ ಅಗತ್ಯತೆ ಇದೆಯೇ? ಈ ಅಗತ್ಯತೆಯನ್ನು ನೀವು ಆನ್‌ಲೈನ್ ಮೂಲಕ ಪೂರೈಸಿಕೊಳ್ಳಬಹುದು. ಇದು ರೈಲ್ವೆ ಮಂಡಳಿ ನೀಡಿದ ಸೂಚನೆ. ಪೂರ್ಣ ದರಪಟ್ಟಿಯಂತೆ ವಿಶೇಷ ರೈಲು, ಬೋಗಿಗಳು, ಸಲೂನ್ (ರೈಲಿನ ವಿಶಾಲ ಬೋಗಿ) ಅನ್ನು ಈಗ ಏಕಗವಾಕ್ಷಿ ಮುಂಗಡ ವ್ಯವಸ್ಥೆ ಮೂಲಕ ಕಾದಿರಿಸಬಹುದು ಎಂದು ರೈಲ್ವೆ ಮಂಡಳಿ ಹೊರಡಿಸಿದ ಸುತ್ತೋಲೆ ಹೇಳಿದೆ.

ಇನ್ನು ಮುಂದೆ ಯಾವುದೇ ವ್ಯಕ್ತಿ ಅಥವಾ ತಂಡ ಪೂರ್ಣ ದರಪಟ್ಟಿಯಂತೆ ರೈಲು, ಬೋಗಿ ಕೋರಿದರೆ ಐಆರ್‌ಟಿಸಿಯನ್ನು ಸಂಪರ್ಕಿಸಿ. ವ್ಯಕ್ತಿ ಅಥವಾ ಗುಂಪಿನ ಪರವಾಗಿ ಐಆರ್‌ಟಿಸಿ ರೈಲು, ಬೋಗಿಗಳನ್ನು ಕಾಯ್ದಿರಿಸುತ್ತದೆ ಎಂದು ಈ ತಿಂಗಳು ರೈಲ್ವೆ ಮಂಡಳಿ ಹೊರಡಿಸಿದ ಸುತ್ತೋಲೆ ತಿಳಿಸಿದೆ. ಪ್ರಸ್ತುತ ರೈಲು ಅಥವಾ ಕೋಚ್‌ಗಳನ್ನು ಕಾಯ್ದಿರಿಸಲು ಸಂಬಂಧಿಸಿದ ತಂಡ ಎಲ್ಲಿಂದ ಪ್ರಯಾಣ ಆರಂಭಿಸಲಾಗುತ್ತದೆಯೋ ಅಲ್ಲಿನ ರೈಲು ನಿಲ್ದಾಣದ ಮುಂಗಡ ಕಾಯ್ದಿರಿಸುವ ಮುಖ್ಯ ಉಸ್ತುವಾರಿ ಅಥವಾ ಸ್ಟೇಶನ್ ಮಾಸ್ಟರ್‌ರನ್ನು ಭೇಟಿಯಾಗಬೇಕು ಹಾಗೂ ಪೂರ್ಣ ದರ ಪಟ್ಟಿ ಮುಂಗಡ ಕಾಯ್ದಿರಿಸಲು ಪ್ರಯಾಣದ ವಿವರ ಒಳಗೊಂಡ ಅರ್ಜಿ ಸಲ್ಲಿಸಬೇಕು. ಹಣ ಠೇವಣಿ ಇರಿಸಿದ ಬಳಿಕ, ಅವರು ರಸೀದಿ ನೀಡುತ್ತಾರೆ. ಅದರಲ್ಲಿ ಅನನ್ಯ ಪೂರ್ಣ ದರಪಟ್ಟಿ ಸಂಖ್ಯೆ ಮುದ್ರಿಸಿರುತ್ತದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News