ಆಸ್ಟ್ರೇಲಿಯ: ದೇವಾಲಯದ ಜೀರ್ಣೋದ್ಧಾರಕ್ಕೆ ವಿಕ್ಟೋರಿಯ ಸರಕಾರದಿಂದ ನೆರವು

Update: 2018-02-17 16:46 GMT

ಮೆಲ್ಬರ್ನ್, ಫೆ. 17: ಆಸ್ಟ್ರೇಲಿಯದಲ್ಲಿ ಹಿಂದೂ ಧರ್ಮವು ವೇಗವಾಗಿ ಬೆಳೆಯುತ್ತಿರುವಂತೆಯೇ, ಇಲ್ಲಿನ ಶ್ರೀ ಶಿವ ವಿಷ್ಣು ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 1,60,000 ಡಾಲರ್ (ಸುಮಾರು 1.03 ಕೋಟಿ ರೂಪಾಯಿ) ಮೊತ್ತ ನೀಡುವುದಾಗಿ ವಿಕ್ಟೋರಿಯ ರಾಜ್ಯ ಸರಕಾರವು ಶುಕ್ರವಾರ ಘೋಷಿಸಿದೆ.

ಶ್ರೀ ಶಿವ ವಿಷ್ಣು ದೇವಸ್ಥಾನವನ್ನು 1994ರಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಇದು ಆಸ್ಟ್ರೇಲಿಯದಲ್ಲಿರುವ ಅತ್ಯಂತ ದೊಡ್ಡ ದೇವಾಲಯ ಎಂಬುದಾಗಿ ಪರಿಗಣಿಸಲಾಗಿದೆ.

ದೇವಾಲಯವನ್ನು ಅಭಿವೃದ್ಧಿಪಡಿಸುವುದಕ್ಕಾಗಿ ವಿಕ್ಟೋರಿಯದ ಹಿಂದು ಸೊಸೈಟಿಗೆ ಸರಕಾರವು 1.60 ಲಕ್ಷ ಡಾಲರ್ ನಿಧಿ ನೀಡುವುದಾಗಿ ಶುಕ್ರವಾರ ದೇವಸ್ಥಾನಕ್ಕೆ ಭೇಟಿ ನೀಡಿದ ವಿಕ್ಟೋರಿಯದ ಬಹುಸಾಂಸ್ಕೃತಿಕ ವ್ಯವಹಾರಗಳ ಸಚಿವ ರಾಬಿನ್ ಸ್ಕಾಟ್ ಹೇಳಿದರು.

 ವಿಕ್ಟೋರಿಯದ ಪ್ರತಿಯೋರ್ವ ನಿವಾಸಿಯೂ ತನ್ನ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ತನ್ನದೇ ಪರಂಪರೆಯ ಸ್ಥಳಗಳಲ್ಲಿ ಸಂರಕ್ಷಿಸಲು ಸಾಧ್ಯವಾಗುವಂಥ ಸಮಾಜವೊಂದನ್ನು ಬೆಳೆಸಲು ತನ್ನ ರಾಜ್ಯ ಸರಕಾರ ಉತ್ಸುಕವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News