ಹರ್ಯಾಣ: ಅಮಿತ್ ಶಾ ರ‍್ಯಾಲಿ ಬೆನ್ನಿಗೆ ಪಕ್ಷ ಬಿಡುವ ಘೋಷಣೆ ಮಾಡಿದ ಬಿಜೆಪಿ ಸಂಸದ

Update: 2018-02-17 18:09 GMT

ಹೊಸದಿಲ್ಲಿ, ಫೆ. 17: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹರ್ಯಾಣದ ಜಿಂದ್ ನಲ್ಲಿ ಸಮಾವೇಶ ನಡೆಸಿದ ಮರುದಿನವೇ ರಾಜ್ಯದಲ್ಲಿ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ. ಕುರುಕ್ಷೇತ್ರದ ಸಂಸದ ಹಾಗು ಹಿಂದುಳಿದ ವರ್ಗಗಳ ಪ್ರಮುಖ ನಾಯಕ ರಾಜ್ ಕುಮಾರ್ ಸೈನಿ ಪಕ್ಷ ಬಿಡುವ ಸೂಚನೆ ನೀಡಿದ್ದಾರೆ. 

ಅಮಿತ್ ಶಾ ರ‍್ಯಾಲಿ ನಡೆದ ಮರುದಿನವೇ ಈ ವಿಷಯ ಪ್ರಕಟಿಸಿರುವ ರಾಜ್ ಕುಮಾರ್ ತಾನು ಹೊಸ ಪಕ್ಷ ರಚಿಸಿ, ಮುಂದಿನ ಲೋಕಸಭಾ ಚುನಾವಣೆ ಯಲ್ಲಿ ರಾಜ್ಯದ ಎಲ್ಲಾ 10 ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇನೆ ಎಂದು ಹೇಳಿದ್ದಾರೆ. 

ಹರ್ಯಾಣದ ರ‍್ಯಾಲಿ ಯಶಸ್ವಿಯಾಗಿದೆ ಎಂದು ಅಮಿತ್ ಶಾ ಹೇಳಿದ ಬೆನ್ನಿಗೆ, ಕಾಂಗ್ರೆಸ್ ಸಮಾವೇಶದಲ್ಲಿ ಖಾಲಿ ಕುರ್ಚಿಗಳು ಎದ್ದು ಕಾಣುತ್ತಿದ್ದ ವೀಡಿಯೊ ಬಿಡುಗಡೆ ಮಾಡಿತ್ತು.

ಬಿಜೆಪಿ ಜಾಟ್ ಸಮುದಾಯವನ್ನು ಓಲೈಸುತ್ತಿದೆ ಎಂಬುದು ರಾಜ್ ಕುಮಾರ್ ಅಸಮಾಧಾನಕ್ಕೆ ಕಾರಣ. ಅವರು ಜಾಟ್ ಮೀಸಲಾತಿ ಬೇಡಿಕೆಯ ಕಟ್ಟಾ ವಿರೋಧಿಯಾಗಿದ್ದಾರೆ.

ಅಮಿತ್ ಶಾ ರ‍್ಯಾಲಿಯಲ್ಲಿ ರಾಜ್ ಕುಮಾರ್ ಭಾಗವಹಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News