ಪಿಎಫ್ಐ ದೇರಳಕಟ್ಟೆ ವಲಯ ವತಿಯಿಂದ 'ಪಾಪ್ಯುಲರ್ ಫ್ರಂಟ್ ಡೇ'

Update: 2018-02-17 18:56 GMT

ದೇರಳಕಟ್ಟೆ, ಫೆ. 17: ಪಿಎಫ್ಐ ದೇರಳಕಟ್ಟೆ ವಲಯ ವತಿಯಿಂದ 'ಪಾಪ್ಯುಲರ್ ಫ್ರಂಟ್ ಡೇ' ಪ್ರಯುಕ್ತ ಶನಿವಾರ ಇಲ್ಲಿನ ಸಿಟಿ ಗ್ರೌಂಡ್ ಬಳಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಸಮಿತಿ ಸದಸ್ಯ ನೌಫಲ್ ಪನೀರ್ ವಹಿಸಿದ್ದರು. 

ಧ್ವಜಾರೋಹಣ ಕಾರ್ಯಕ್ರಮವನ್ನು ಒಮೆರಾ ಗೋಲ್ಡ್ ದೇರಳಕಟ್ಟೆ ಇದರ ನಾಸಿರ್ ಅಹ್ಮದ್ ನೆರವೇರಿಸಿದರು. ನೌಶಾದ್ ಕಿನ್ಯಾ ದಿಕ್ಸೂಚಿ ಭಾಷಣ ಮಾಡಿದರು. ಫಯಾಝ್ ದೊಡ್ಡಮನೆ ಪಾಪ್ಯುಲರ್ ಫ್ರಂಟ್ ಡೇ ಸಂದೇಶ ನೀಡಿದರು. 

ಅಬ್ಬಾಸ್ ಕಿನ್ಯಾ, ಅಬ್ದುಲ್ಲ ಕಿನ್ಯಾ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು. ನಾಸೀರ್ ಕೋಡಿ ಸ್ವಾಗತಿಸಿದರು, ಹಾಸಿಮ್ ಕಿನ್ಯಾ ಘೋಷಣೆ ಹೇಳಿದರು. ಸುಹೈಲ್ ಕುತ್ತಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News