ತೊಕ್ಕೊಟ್ಟು: ‘ಸುರಕ್ಷಾ ಪಾಲಿಕ್ಲಿನಿಕ್’ ಶುಭಾರಂಭ

Update: 2018-02-18 08:18 GMT

ಮಂಗಳೂರು, ಫೆ. 18: ತೆೊಕ್ಕೊಟ್ಟು ಬಸ್ ನಿಲ್ದಾಣ ಸಮೀಪದ ಸ್ಕೈ ಟವರ್‌ನಲ್ಲಿ ತೆರೆಯಲ್ಪಟ್ಟ ‘ಸುರಕ್ಷಾ ಪಾಲಿಕ್ಲಿನಿಕ್’ ರವಿವಾರ ಶುಭಾರಂಭಗೊಂಡಿತು.

ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರು ಹೆಲ್ತ್ ಕಾಂಪ್ಲೆಕ್ಸ್ ಮತ್ತು ನಿಟ್ಟೆ ವಿವಿಯ ಪ್ರೊ ಚಾನ್ಸಲರ್ ಡಾ.ಶಾಂತರಾಮ ಶೆಟ್ಟಿ ಅವರು ಪಾಲಿ ಕ್ಲಿನಿಕ್ ಹಾಗೂ ಮಂಗಳೂರು ಡಯಾಸಿಸ್‌ನ ವಿಕಾರ್ ಜನರಲ್ ಫಾ.ಡೆನಿಸ್ ಪ್ರಭು ಅವರು ಡಯಗ್ನಾಸ್ಟಿಕ್ ಸೆಂಟರ್‌ನ್ನು ಉದ್ಘಾಟಿಸಿದರು. ಇಸ್ಮಾಯೀಲ್ ಮುಸ್ಲಿಯಾರ್ ದುಆಗೈದರು.

ಈ ಸಂದರ್ಭ ಮಾತನಾಡಿದ ಸಚಿವ ಯು.ಟಿ.ಖಾದರ್, ಮಂಗಳೂರಿನ ಬಳಿಕ ಜಿಲ್ಲೆಯಲ್ಲಿ ತೊಕ್ಕೊಟ್ಟು-ಉಳ್ಳಾಲ ಅತ್ಯಂತ ವೇಗವಾಗಿ ಪ್ರಗತಿ ಹೊಂದುತ್ತಿವೆ. ಜನನಿಬಿಡ ಪ್ರದೇಶವಾದ ತೊಕ್ಕೊಟ್ಟಿನಲ್ಲಿ ಪಾಲಿ ಕ್ಲಿನಿಕ್‌ನ ಅಗತ್ಯತೆಯನ್ನು ಮನಗಂಡ ಯುವ ನಾಲ್ವರು ಉದ್ಯಮಿಗಳು ಮುಕ್ತ ಮನಸ್ಸಿನಿಂದ ‘ಸುರಕ್ಷಾ ಪಾಲಿಕ್ಲಿನಿಕ್’ ಸ್ಥಾಪಿಸಿರುವುದು ಶ್ಲಾಘನೀಯ. ಆರೋಗ್ಯಕರ ಸಮಾಜಕ್ಕೆ ಇಂತಹ ಪಾಲಿಕ್ಲಿನಿಕ್‌ಗಳ ಅಗತ್ಯವಿದೆ. ಈ ಮಧ್ಯೆ ಔಷಧ ಮತ್ತು ಮಾತ್ರೆಗಳನ್ನು ದುರುಪಯೋಗಪಡಿಸುವಂತಹ ಪ್ರಸಂಗ ಕಂಡುಬಂದರೆ ತಕ್ಷಣ ಸಂಬಂಧಪಟ್ಟ ಯುವಕರ ಮನೆಯವರಿಗೆ ಮಾಹಿತಿ ರವಾನಿಸುವ ಸಾಮಾಜಿಕ ಕಾರ್ಯವನ್ನೂ ಕೂಡ ಸುರಕ್ಷಾ ಪಾಲಿಕ್ಲಿನಿಕ್‌ನ ಪಾಲುದಾರರು ಮಾಡಬೇಕಿದೆ ಎಂದರು.

 ಮುಖ್ಯ ಅತಿಥಿಗಳಾಗಿ ಭಾರತೀಯ ಮಾನವ ಹಕ್ಕು ಸಮಿತಿಯ ರಾಜ್ಯಾಧ್ಯಕ್ಷ ಜೊಜೊ ಕೆ. ಜೋಸೆಫ್, ಉಳ್ಳಾಲ ಸೈಯದ್ ಮದನಿ ದರ್ಗಾ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಕಾಂಗ್ರೆಸ್ ಮುಖಂಡ ಸಲೀಂ ಯು.ಬಿ., ಉಳ್ಳಾಲ ನಗರಸಭೆಯ ಸದಸ್ಯ ಫಾರೂಕ್ ಯು.ಎಚ್., ಮುಹಮ್ಮದ್ ಬಾವಾ ಮಂಚಿಲ ಭಾಗವಹಿಸಿದ್ದರು.

ಪಾಲಿಕ್ಲಿನಿಕ್‌ನ ಪಾಲುದಾರರಾದ ಎಂ.ಎ.ಫಝಲ್, ಮುಹಮ್ಮದ್ ಶರೀಫ್, ತಾಜುದ್ದೀನ್, ಅಬ್ದುಲ್ ಸತ್ತಾರ್ ಉಪಸ್ಥಿತರಿದ್ದರು. ಬ್ಯಾರಿ ಅಕಾಡಮಿಯ ಸದಸ್ಯ ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

*ನೂತನ ‘ಸುರಕ್ಷಾ ಪಾಲಿಕ್ಲಿನಿಕ್’ನಲ್ಲಿ ಮೆಡಿಕಲ್ಸ್, ಕ್ಲಿನಿಕಲ್ ಲ್ಯಾಬ್, ಅಲ್ಟ್ರಾ ಸೌಂಡ್ ಇಕೊ ಆ್ಯಂಡ್ ಕಲರ್ ಡೊಪ್ಲರ್ ಸ್ಕಾನ್, ಎಕ್ಸ್‌ರೇ ಮತ್ತು ಇಸಿಜಿ ಸೌಲಭ್ಯಗಳು ಹೊಂದಿವೆ.

ಉದ್ಘಾಟನಾ ಕಾರ್ಯಕ್ರಮ ಪ್ರಯುಕ್ತ ಫೆ.19ರಿಂದ 21ರವರೆಗೆ ಮಧುಮೇಹ ರೋಗಿಗಳ ಉಚಿತ ತಪಾಸಣೆ ಹಮ್ಮಿಕೊಳ್ಳಲಾಗಿದೆ. ಮಾ.17ರವರೆಗೆ ಶೇ.50ರ ರಿಯಾಯಿತಿ ದರದಲ್ಲಿ ಲಿಪಿಡ್ ಪ್ರೊಫೈಲ್ (ಎಲ್‌ಪಿ), ಲಿವರ್ ಫಂಕ್ಷನ್ ಟೆಸ್ಟ್ (ಎಲ್‌ಎಫ್‌ಟಿ), ಕಂಪ್ಲೀಟ್ ಬ್ಲಡ್ ಕೌಂಟ್ (ಸಿಬಿಸಿ) ನಡೆಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News