ಇಸ್ರೇಲ್ ಸೈನಿಕರ ಗುಂಡಿಗೆ ಇಬ್ಬರು ಫೆಲೆಸ್ತೀನೀಯರು ಬಲಿ

Update: 2018-02-18 16:21 GMT

ಗಾಝಾ ಸಿಟಿ (ಫೆಲೆಸ್ತೀನ್), ಫೆ. 18: ಗಾಝಾದಲ್ಲಿ ಇಸ್ರೇಲ್ ಸೇನೆ ನಡೆಸಿದ ಗೋಲಿಬಾರ್‌ನಲ್ಲಿ ಇಬ್ಬರು ಫೆಲೆಸ್ತೀನೀಯರು ಮೃತಪಟ್ಟಿದ್ದಾರೆ ಎಂದು ಗಾಝಾದ ವೈದ್ಯಕೀಯ ಮೂಲಗಳು ರವಿವಾರ ತಿಳಿಸಿವೆ.

ಇದಕ್ಕೂ ಮೊದಲು ಫೆಲೆಸ್ತೀನ್ ಗಡಿಯಲ್ಲಿ ಸ್ಫೋಟಕವೊಂದು ಸಿಡಿದು ಹಲವು ಇಸ್ರೇಲ್ ಸೈನಿಕರು ಗಾಯಗೊಂಡ ಬಳಿಕ ಈ ದಾಳಿ ನಡೆಯಿತು.

ದಕ್ಷಿಣ ಗಾಝಾದಲ್ಲಿರುವ ರಫಾದ ಪೂರ್ವ ಭಾಗದಲ್ಲಿ ಈ ದಾಳಿ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಗಡಿ ಬೇಲಿಯತ್ತ ‘ಸಂಶಯಾಸ್ಪದ ರೀತಿಯಲ್ಲಿ’ ಬರುತ್ತಿದ್ದ ಹಲವಾರು ಫೆಲೆಸ್ತೀನೀಯರತ್ತ ತನ್ನ ಸೈನಿಕರು ‘ಎಚ್ಚರಿಕೆ ಗುಂಡು’ಗಳನ್ನು ಹಾರಿಸಿದ್ದಾಗಿ ಇಸ್ರೇಲ್ ಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News