ಟ್ರಂಪ್, ನಿಮಗೆ ನಾಚಿಕೆಯಾಗಬೇಕು: ಅಮೆರಿಕಾ ಅಧ್ಯಕ್ಷ ವಿರುದ್ಧ ಕಿಡಿಕಾರಿದ ಬಾಲಕಿ

Update: 2018-02-18 17:21 GMT

ಫೋರ್ಟ್ ಲಾಡರ್‌ಡೇಲ್ (ಅಮೆರಿಕ), ಫೆ. 18: ಅಮೆರಿಕದಲ್ಲಿ ಬಂದೂಕು ನಿಯಂತ್ರಣವನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಶನಿವಾರ ಸಾವಿರಾರು ಮಂದಿ ಫ್ಲೋರಿಡದಲ್ಲಿ ಬೀದಿಗಿಳಿದರು. ಮೂರು ದಿನಗಳ ಹಿಂದೆ ಮ್ಯಾರ್ಜರಿ ಸ್ಟೋನ್‌ಮನ್ ಡಗ್ಲಸ್ ಹೈಸ್ಕೂಲ್‌ನಲ್ಲಿ ಮಾನಸಿಕ ಅಸ್ಥಿರತೆ ಹೊಂದಿದ ಹಳೆ ವಿದ್ಯಾರ್ಥಿಯೊಬ್ಬ ಬಂದೂಕಿನಿಂದ ಗುಂಡುಗಳನ್ನು ಹಾರಿಸಿ 17 ಮಂದಿಯನ್ನು ಕೊಂದ ಬಳಿಕ, ಅಮೆರಿಕದಾದ್ಯಂತ ಬಂದೂಕು ವಿರೋಧಿ ಅಲೆ ಎದ್ದಿದೆ.

ಬುಧವಾರ ನಡೆದ ಘಟನೆಯಲ್ಲಿ ಬದುಕುಳಿದ ಬಾಲಕಿಯೊಬ್ಬರು, ಬಂದೂಕು ನಿಯಂತ್ರಣ ತರುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಕಿಡಿಗಾರಿದರು.

ವಿದ್ಯಾರ್ಥಿಗಳು, ಹೆತ್ತವರು ಮತ್ತು ಸಮೀಪದ ಸೇಂಟ್ ಲಾಡರ್‌ಡೇಲ್ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದ 18 ವರ್ಷದ ಎಮ್ಮಾ ಗೊನ್ಸಾಲಿಸ್, ಪ್ರಭಾವಿ ರಾಷ್ಟ್ರೀಯ ರೈಫಲ್ ಅಸೋಸಿಯೇಶನ್ ಜೊತೆ ಟ್ರಂಪ್ ಹೊಂದಿರುವ ಬಾಂಧವ್ಯವನ್ನು ಪ್ರಸ್ತಾಪಿಸಿದರು.

 ‘‘ನ್ಯಾಶನಲ್ ರೈಫಲ್ಸ್ ಅಸೋಸಿಯೇಶನ್‌ನಿಂದ ದೇಣಿಗೆ ಪಡೆದುಕೊಳ್ಳುತ್ತಿರುವ ರಾಜಕಾರಣಿಗಳೇ, ನಿಮಗೆ ನಾಚಿಕೆಯಾಗಬೇಕು’’ ಎಂದು ಅವರು ಹೇಳಿದಾಗ, ಸಭಿಕರು ಕೂಡ ‘ನಾಚಿಕೆಯಾಗಬೇಕು, ನಾಚಿಕೆಯಾಗಬೇಕು’ ಎಂದು ಕೂಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News